ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮೃತ್ಯುಂಜಯ ದೇವಾಲಯ ವಸ್ತ್ರ ಸಂಹಿತೆ ವಿಚಾರ ತೀವ್ರ ಚರ್ಚೆಯಲ್ಲಿದೆ. ಎರಡು ಸಮುದಾಯಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದು, ಪರಿಸ್ಥಿತಿ ತಿಳಿಗೊಳಿಸಲು ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ಈ ನಡುವೆ ದೇವಾಲಯದ ಅರ್ಚಕರ ಮೇಲೆ ಇಂದು ಮಾರಣಾಂತಿಕ ಹಲ್ಲೆ ನಡೆದಿದೆ. ವಿಘ್ನೇಶ್ ಭಟ್ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಅರ್ಚಕ. ಕಟ್ಟೆಮಾಡು ಬಳಿಯ ಮೂರ್ನಾಡುವಿನ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇಂದು ಸಂಜೆ ವೇಳೆಗೆ ವಿಘ್ನೇಶ್ ಮನೆ ಬಳಿ ಬಂದ ಅವರು ಮನೆಯಿಂದ ಹೊರಗೆ ಕರೆದು ಮಾತನಾಡಿಸುತ್ತಾ, ನೀವು ಮೃತ್ಯುಂಜಯ ದೇವಾಲಯದ ಅರ್ಚಕರಾ ಎಂದು ಕೇಳಿ ಮನಸ್ಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಮಡಿಕೇರಿಯಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನನ್ನ ಮೇಲೆ ತೀವ್ರ ಹಲ್ಲೆ ನಡೆಸಿದ ಇಬ್ಬರು ಚಾಕು ಹಾಕಲು ಮುಂದಾದ್ರು. ಈ ವೇಳೆ ತಡೆಯಲು ಬಂದ ಅಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಬೆರಳಿನಲ್ಲಿದ್ದ ಉಂಗುವರನ್ನು ಕಸಿದುಕೊಂಡಿದ್ದಾರೆಂದು ವಿಘ್ನೇಶ್ ಭಟ್ ಆರೋಪಿಸಿದ್ದಾರೆ. ಕಾಕೋಟುಪರಂಬುವಿನ ಅನಿಲ್ ಎಂಬವರು ಹಾಗೂ ಇನ್ನೊಬ್ಬರು ಸೇರಿ ಹಲ್ಲೆ ನಡೆಸಿದ್ದು ಎಂದು ಹೇಳಿಕೆ ನೀಡಿದ್ದಾರೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆ ಸದ್ದು ಮಾಡಿದ ಮೃತ್ಯುಂಜಯ ದೇವಾಲಯ ಸಂಘರ್ಷ – ಅರ್ಚಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು..!
RELATED ARTICLES