ಹಾಸನ : ತಮ್ಮ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಆರೋಪಿಸಿ ಹಲ್ಲೆಗೊಳಗಾಗಿದ್ದ ವೃದ್ಧೆ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.
ನಂಜಮ್ಮ(೬೫) ಮೃತ ವೃದ್ದೆ. ನಮ್ಮ ಮಗನನ್ನು ಮಾಟ ಮಂತ್ರದಿಂದ ಸಾಯಿಸಿದ್ದಾರೆಂದು ಆರೋಪಿಸಿ ನಂಜಮ್ಮರ ಸಹೋದರ ಮಂಜೇಗೌಡ ಹಲ್ಲೆ ನಡೆಸಿದ್ದರು. ಈ ವೇಳೆ ನಂಜಮ್ಮಗೆ ವಿಷ ಪ್ರಾಶಾನ ಮಾಡಿರುವ ಆರೋಪವೂ ಕೇಳಿಬಂದಿತ್ತು. ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಂಜಮ್ಮ ಕೊನೆಯುಸಿರೆಳೆದಿದ್ದಾರೆ.
ತಿಂಗಳ ಹಿಂದೆ ನಂಜಮ್ಮ ಸಹೋದರ ಮಂಜೇಗೌಡ ಪುತ್ರ ಸಂಪತ್ ಸಾವಾಗಿತ್ತು. ಅನಾರೋಗ್ಯದಿಂದ ಸಂಪತ್ ಮೃತಪಟ್ಟಿದ್ದ. ಮಗನ ಸಾವಿಗೆ ನಂಜಮ್ಮ ಹಾಗು ಪತಿ ಶಂಕರೇಗೌಡ ಕಾರಣ ಮೃತನ ಪೋಷಕರು ಆರೋಪಿಸಿದ್ದರು. ಫೆ. 2 ರಂದು ಮನೆ ಬಳಿ ಹಲ್ಲೆ ನಡೆಸಿದ್ದರು. ಈ ವೇಳೆ ಬಲವಂತವಾಗಿ ವಿಷ ಕುಡಿಸಿರುವ ಆರೋಪ ಕೇಳಿಬಂದಿದೆ. ವಿಷಕುಡಿಸಿ ಕೊಲೆ ಮಾಡಲಾಗಿದೆ ಎಂದು ನಂಜಮ್ಮ ಕುಟುಂದ ಸದಸ್ಯರ ಆರೋಪ ಈ ಬಗ್ಗೆ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿತ್ತು. ನಂಜಮ್ಮಗೆ ಮಂಜೇಗೌಡ, ನೀಲಮ್ಮ, ಸಾವಿತ್ರಮ್ಮ, ಮಧುರಿಂದ ವಿಷ ಪ್ರಾಶಾನ ಮಾಡಿಸಿದ ಆರೋಪ ಕೇಳಿಬಂದಿದೆ.
ಈ ಮೊದಲು ಅಸ್ತಿ ವಿಚಾರವಾಗಿ ನಂಜಮ್ಮ ಹಾಗು ಮಂಜೇಗೌಡ ಕುಟುಂಬದ ವ್ಯಾಜ್ಯವಿತ್ತು. ಈ ವಿಚಾರವಾಗಿ ಎರಡು ಕುಟುಂಬಗಳು ಕಾನೂನು ಹೋರಾಟ ನಡೆಸುತ್ತಿವೆ. ಇದೀಗ ವೃದ್ಧೆ ಮೃತಪಟ್ಟಿದ್ದು, ಎರಡು ಕುಟುಂಬದ ಕಲಹಕ್ಕೆ ವೃದ್ಧ ಜೀವ ಬಲಿಯಾಗಿದೆ. ಹಲ್ಲೆಯಲ್ಲಿ ಗಂಭೀರ ಗಾಯಗೊಂಡಿರುವ ನಂಜಪ್ಪ ಪತಿ ಶಂಕರೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬಿಕ ಕಲಹ : ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ – ಅಸ್ವಸ್ಥಗೊಂಡಿದ್ದ ವೃದ್ಧೆ ಸಾವು – ವಿಷ ಪ್ರಾಶಾನ ಮಾಡಿಸಿ ಕೊಲೆ ಮಾಡಿದ ಆರೋಪ..!
RELATED ARTICLES