ಉತ್ತರ ಕನ್ನಡ : ರಾಜ್ಯಾದ್ಯಂತ ಸದ್ದು ಮಾಡಿದ್ದು ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗಬ್ಬದ ಹಸುವನ್ನು ಕೊಂದು ತಲೆ ಕತ್ತರಿಸಿ ಎಸೆದಿದ್ದ ದುಷ್ಕರ್ಮಿಗಳು, ದೇಹದ ಮಾಂಸವನ್ನು ಭಟ್ಕಳದಲ್ಲಿ ನಡೆದಿದ್ದ ಮದುವೆ ಊಟಕ್ಕೆ ನೀಡಿದ್ದರು ಎಂಬ ವಿಚಾರ ಗೊತ್ತಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ೩೫೦ಕ್ಕೂ ಅಧೀಕ ಮಂದಿಯನ್ನು ವಿಚಾರಣೆ ನಡೆಸಿದ್ದರು. ಇದೀಗ ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್, ಕಾಸರಗೋಡಿನ ಫೈಝನ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ವೇಳೆ ದೊಡ್ಡ ಅಚಾತುರ್ಯವೊಂದು ತಪ್ಪಿದೆ. ಆರೋಪಿ ಫೈಝನ್ನನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದರು. ಈ ಸಂದರ್ಭ ಗೋಹತ್ಯೆಗೆ ಬಳಸಿದ್ದ ಕತ್ತಿಯಿಂದಲೇ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಇದರಿಂದ ನಾಲ್ವರು ಪೊಲೀಸರಿಗೆ ಗಾಯವಾಗಿದ್ದು, ಪ್ರಾಣರಕ್ಷಣೆಗಾಗಿ ಪಿಸ್ತೂಲ್ನಿಂದ ಸಿಪಿಐ ಸಿದ್ದರಾಮೇಶ್ ಆರೋಪಿ ಫೈಝನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಗಬ್ಬದ ಹಸುವನ್ನು ಕೊಂದು ಮಾಂಸ ಮಾಡಿ, ಆ ಮಾಂಸವನ್ನು 7500 ರೂಪಾಯಿಗೆ ಮಾರಾಟ ಮಾಡಿದ್ದರೆಂಬ ವಿಚಾರ ತಿಳಿದುಬಂದಿದೆ. ಆನ್ಲೈನ್ ಟ್ರಾನ್ಸಾಕ್ಷನ್ ಮಾಡಿಕೊಂಡು ಆ ಹಣದಲ್ಲಿ ಪಾರ್ಟಿ ಮಾಡಿದ್ದರೆನ್ನಲಾಗಿದೆ. ಇನ್ನಿಬ್ಬರು ಆರೋಪಿಗಳಾದ ವಾಸಿಮ್ ಹಾಗೂ ಮುಜಾಮಿಲ್ ಪರಾರಿಯಾಗಿದ್ದಾರೆ. ಆರೋಪಿಗಳ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ ಅಂತ ಉತ್ತರ ಕನ್ನಡ ಎಸ್ಪಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಗಬ್ಬದ ಹಸುವಿನ ಹತ್ಯೆ ಪ್ರಕರಣ – ಮಾಂಸ ಮಾಡಿ ಮದುವೆ ಕಾರ್ಯಕ್ರಮಕ್ಕೆ ಮಾರಿದ್ದ ಕಟುಕರು – ಇಬ್ಬರು ಆರೋಪಿಗಳ ಬಂಧನ..!
RELATED ARTICLES