ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗಬ್ಬದ ಹಸುವಿನ ಹತ್ಯೆ ಪ್ರಕರಣವಾಗಿ ಸಚಿವ ಮಂಕಾಳು ವೈದ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಯಾವುದೇ ಕಾರಣಕ್ಕೂ ಗೋ ಕಳ್ಳತನ, ಗೋ ಹತ್ಯೆ ಆಗಬಾರದು. ಗೋಹತ್ಯೆ ಮಾಡಿದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕುತ್ತೇವೆ ಆಕ್ರೋಶದಿಂದ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೋಹತ್ಯೆ ನಡೆದದ್ದು ಇದೇ ಮೊದಲ್ಲ. ಈ ಹಿಂದಿನಿಂದಲೂ ಗೋಹತ್ಯೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಬಿಜೆಪಿ ಅವಧಿಯಲ್ಲೂ ಜಿಲ್ಲೆಯಲ್ಲಿ ಗೋಹತ್ಯೆ ಆಗಿದೆ. ಶಾಸಕ ದಿನಕರ ಶೆಟ್ಟಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಮುಖ್ಯಮಂತ್ರಿ, ಸಚಿವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದ ಅವರು, ಗೋಹಂತಕರನ್ನು ನಾವು ಯಾವುದೇ ಕಾರಣಕ್ಕೂ ರಕ್ಷಿಸಲ್ಲ ಎಂದರು.
ಹೊನ್ನಾವರ ಘಟನೆ ಬೆಳಕಿಗೆ ಬಂದ ಕೂಡಲೇ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಸೂಚಿಸಿದ್ದೇನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಅದರ ಮುಂದೆ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ದುಡಿದು ತಿನ್ನಲು ಬಹಳಷ್ಟು ಅತ್ಯುತ್ತಮ ಮಾರ್ಗ ಇದೆ. ಗೋಹತ್ಯೆ ಮಾಡಿ ಜೀವನ ನಡೆಸುವುದನ್ನು ನಿಲ್ಲಿಸಬೇಕು. ಗೋಹತ್ಯೆ ಹಿಂದೆ ಯಾವುದೇ ಧರ್ಮದವರು ಇದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಗೋಹತ್ಯೆ ಮಾಡಿದರೆ ಸರ್ಕಲ್ನಲ್ಲಿ ನಿಲ್ಸಿ ಗುಂಡು ಹಾಕ್ತೇವೆ – ಸಚಿವ ಮಂಕಾಳು ವೈದ್ಯ ಎಚ್ಚರಿಕೆ..!
RELATED ARTICLES