Wednesday, March 25, 2026
Homebig breakingಮದುವೆಯಾಗಿ 12 ವರ್ಷದ ನಂತರ ಮಗುವಿಗೆ ಜನ್ಮವಿತ್ತ ಮಹಿಳೆ - ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಕೊನೆಯುಸಿರು..!...

ಮದುವೆಯಾಗಿ 12 ವರ್ಷದ ನಂತರ ಮಗುವಿಗೆ ಜನ್ಮವಿತ್ತ ಮಹಿಳೆ – ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಕೊನೆಯುಸಿರು..! ಬೆಳಗಾವಿಯಲ್ಲೊಂದು ಕರುಳು ಹಿಂಡುವ ಘಟನೆ..!

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಬಾಣಂತಿ ಸಾವು ಪ್ರಕರಣ ದಾಖಲಾಗಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಮೃತ ದುರ್ದೈವಿ‌. ನಿನ್ನೆ ಸಂಜೆ 4 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಅಂಜಲಿ ಪಾಟೀಲ್‌ ರಾತ್ರಿ ಸಿಸೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿದ್ದರು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್‌ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿಲಜಿ ಗ್ರಾಮದ ನಿಂಗಾಣಿ ಪಾಟೀಲ ಜೊತೆಗೆ ೧೨ ವರ್ಷದ ಹಿಂದೆ ವಿವಾಹವಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಅಂಜಲಿ ಸಾವಾಗಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಬಾಣಂತಿ ಅಂಜಲಿ ಪಾಟೀಲ್ ಸಂಬಂಧಿ ರಾಹುಲ್, ‘ನಿನ್ನೆ ಅಂಜಲಿ ಪಾಟೀಲ್ ನಡೆದುಕೊಂಡು ಬಂದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇವತ್ತು ಹೆರಿಗೆ ಮಾಡಲ್ಲ ಅಂತಾ ವೈದ್ಯರು ಹೇಳಿದಾಗ ಅವರ ಪತಿ ಮನೆಗೆ ಹೋಗಿದ್ದರು. ಬಳಿಕ ಅವರ ಪತಿ ಮನೆಯಿಂದ ಬರುವ ಮುಂಚೆಯೇ ಸೀಜರಿನ್ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಪತಿಯ ಬಳಿ ಖಾಲಿ ಪೇಪರ್ ಮೇಲೆ ಸಹಿ ತಗೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಪೇಷಂಟ್ ಕಂಡೀಷನ್ ಕ್ರಿಟಿಕಲ್ ಇದೆ ಅಂತಾ ಹೇಳಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಅಂತ ಹೇಳಿದಾಗ ಅವರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ‌‌.
ಆಮ್ನಿಯೋಟಿಕ್ ಫ್ಲ್ಯೂಡ್ ಎಂಬಾಲಿಸಮ್‌(AFE)ನಿಂದ ಸಾವು ಶಂಕೆ ಎಂದ ಬಿಮ್ಸ್ ನಿರ್ದೇಶಕರು.. ಏನಿದು AFE?
ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಶವಾಗರಕ್ಕೆ ಭೇಟಿ ನೀಡಿದ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ್ ಶೆಟ್ಟಿ, ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂಬ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಅಶೋಕ ಕುಮಾರ ಶೆಟ್ಟಿ, ’40 ವಾರ ತುಂಬಿದ ಗರ್ಭಿಣಿ ಬಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಹೆರಿಗೆ ತಜ್ಞರು ಪರಿಶೀಲಿಸಿದಾಗ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಗೊತ್ತಾಗಿದೆ. ತಕ್ಷಣವೇ ‌ಸಿಜರಿನ್ ಮಾಡಲು ಆಪರೇಷನ್ ಥೇಟರ್‌ಗೆ ಕರೆದೊಯ್ಯಲಾಗಿದೆ.‌ ಆಗ ದಿಢೀರ್ ಅಂಜಲಿ ಪಾಟೀಲ್‌ರವರಿಗೆ ಪಿಟ್ಸ್ (ಮೂರ್ಛೆರೋಗ) ಕಾಣಿಸಿಕೊಂಡು ರಕ್ತದೊತ್ತಡ ಕಡಿಮೆಯಾಗಿದೆ. ಇನ್ನು ಆಮ್ನಿಯೊಟಿಕ್ ಫ್ಲ್ಯೂಡ್ ಓಪನ್ ಆದಾಗ ಸ್ವಲ್ಪ ವಾಸನೆ ಬರುತ್ತಿತ್ತು. ಆಗ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸಂ ಆಗಿರಬಹುದು ಎಂದು ಶಂಕಿಸಲಾಗಿದೆ.‌ ಬೆಳಗ್ಗೆ ಅಂಜಲಿ ಪಾಟೀಲ ‌ಸಾವಾಗಿದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡುಬಂದಿಲ್ಲ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ವರ್ಷಕ್ಕೆ 10 ಸಾವಿರ ಹೆರಿಗೆ ಆಗುತ್ತೆ. ಅದರಲ್ಲಿ ಶೇಕಡ 40 ರಷ್ಟು ಸಿಜರಿನ್ ಆಗುತ್ತವೆ. ಜಿಲ್ಲೆಯ ವಿವಿಧ ಪಿಎಚ್‌ಸಿಗಳಿಂದ ಬಹುತೇಕ ‌ಹೈರಿಸ್ಕ್ ಪೇಸೆಂಟ್‌ಗಳು ಬಿಮ್ಸ್ ಆಸ್ಪತ್ರೆಗೆ ಬರುತ್ತವೆ. ಆಮ್ನಿಯೊಟೆಕ್ ಫ್ಲ್ಯೂಢ್ ಎಂಬಾಲೀಸಮ ಕಂಡು ಬಂದರೆ ಅದು ಯಾರ ಕೈಯಲ್ಲೂ ಇರಲ್ಲ’ ಎಂದಿದ್ದಾರೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!