ನವದೆಹಲಿ : ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ಮುಂದುವರೆದಿದೆ. ಇಷ್ಟು ದಿನ ರಾಜ್ಯದಲ್ಲಿ ವಕ್ಪ್ರಹಾರ ನಡೆಸುತ್ತಿದ್ದ ಯತ್ನಾಳ್, ಈಗ ದೆಹಲಿಯಲ್ಲಿ ಅಬ್ಬರಿಸುತ್ತಿದ್ದಾರೆ.
ಪಕ್ಷದ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಯತ್ನಾಳ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬಿ.ವೈ. ವಿಜಯೇಂದ್ರ ಜೊತೆಯಲ್ಲಿ ಯಾರೂ ಇಲ್ಲ. ಕೆಲ ಪೇಮೆಂಟ್ ಸ್ವಾಮೀಜಿಗಳಿದ್ದಾರೆ. ಅವರಿಗೆ ಒಂದು ಲಕ್ಷ ರೂಪಾಯಿ ಕೊಟ್ಟರೆ ಮಾತನಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಪರ ಲಿಂಗಾಯತರು ಇಲ್ಲ. ಅದೆಲ್ಲ ಮುಗಿದು ಹೋದ ಅಧ್ಯಾಯ. ರಾಜ್ಯದಲ್ಲಿ ಬಿಎಸ್ವೈಗೆ ಗೌರವವಿತ್ತು. ಆದರೆ ಅದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಆಶೀರ್ವಾದದಿಂದ, ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾದರು. ರಮೇಶ್ ಜಾರಕಿಹೊಳಿ, ಯೋಗೇಶ್ವರ್ರಿಂದ ಬಿಜೆಪಿ ಸರ್ಕಾರ ಬಂದಿತ್ತು. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದು ಹೇಳಿದರು.
ವಿಜಯೇಂದ್ರ ಜೊತೆಗೆ ಕೆಲವು ಪೇಮೆಂಟ್ ಸ್ವಾಮೀಜಿಗಳಿದ್ದಾರೆ ಅಷ್ಟೇ ಎಂದ ಯತ್ನಾಳ್..!
RELATED ARTICLES