Monday, March 30, 2026
Homebig breakingಅಪಘಾತದಲ್ಲಿ ಕೊನೆಯುಸಿರೆಳೆದ ಅಪ್ಪ - ವಿಚಾರ ತಿಳಿಸದೆ ಮದ್ವೆ ಮಾಡಿಸಿದ ಕುಟುಂಬಸ್ಥರು - ಮನಮಿಡಿಯುವ ಮದುವೆಗೆ...

ಅಪಘಾತದಲ್ಲಿ ಕೊನೆಯುಸಿರೆಳೆದ ಅಪ್ಪ – ವಿಚಾರ ತಿಳಿಸದೆ ಮದ್ವೆ ಮಾಡಿಸಿದ ಕುಟುಂಬಸ್ಥರು – ಮನಮಿಡಿಯುವ ಮದುವೆಗೆ ಸಾಕ್ಷಿಯಾದ ಕಾಫಿನಾಡು..!

ಚಿಕ್ಕಮಗಳೂರು : ಮಗಳ ಮದ್ವೆ ಅಂದ್ರೆ ಅಪ್ಪ- ಅಮ್ಮನಿಗೆ ಇನ್ನಿಲ್ಲದ ಸಂಭ್ರಮ… ಮಗಳು ಹೊಸ ಮನೆ, ಹೊಸ ಜೀವನ ಕಡೆಗೆ ಸಾಗುತ್ತಿದ್ದಾಳೆ ಅನ್ನುವ ಖುಷಿ… ಹಲವು ಕನಸುಗಳೊಂದಿಗೆ ಮದ್ವೆಯ ಸಂಭ್ರಮದಲ್ಲಿ ಅಪ್ಪ, ಅಮ್ಮ ತೊಡಗಿಸಿಕೊಳ್ತಾರೆ. ಮಗಳು ಹಸೆಮಣೆ ಏರೋದಕ್ಕೆ ಇನ್ನೇನು ಕೆಲವೇ ಗಂಟೆ ಇದೆ ಅನ್ನುವಾಗಲೇ ಅಪ್ಪ ಅಪಘಾತದಲ್ಲಿ ಕೊನೆಯುಸಿರೆಳೆಯುತ್ತಾನೆ. ಆದ್ರೆ ಮಗಳ ಕನಸು ಭಗ್ನವಾಗವಾರದು ಅನ್ನೋ ಕಾರಣಕ್ಕೆ ಆ ವಿಚಾರವನ್ನು ತಿಳಿಸದೆ ನೋವನ್ನು ನುಂಗಿಕೊಂಡ ಮನೆಯವರು, ಸಂಭ್ರಮದಿಂದ ಮದ್ವೆಯನ್ನ ಮಾಡಿಮುಗಿಸ್ತಾರೆ… ಆ ಮೇಲೆ ಮಗಳಿಗೆ ನಿಧಾನವಾಗಿ ವಿಷಯ ತಿಳಿದಾಗ ಅವಳ ದುಃಖದ ಕಟ್ಟೆ ಒಡೆದು ಗೋಳಾಡುವ ಚಿತ್ರಣ…
ಇದನ್ನ ಕೇಳ್ತಿದ್ರೆ ಇದ್ಯಾವ್ದೋ ಸಿನೆಮಾದ ಚಿತ್ರಕಥೆ ಥರ ಅನ್ನಿಸ್ತಿದೆ ಅಲ್ವಾ… ಇದು ಕಥೆಯಲ್ಲ, ಕಾಫಿನಾಡಿನಲ್ಲಿ ನಡೆದ ನೈಗ ಘಟನೆಯ ಚಿತ್ರಣ. ಹೌದಾ ಅಂತ ಅಚ್ಚರಿ ಆಗುತ್ತೆ ಅಲ್ವಾ… ಹೌದು, ಈ ಘಟನೆಯನ್ನ ನಾವು ಒಪ್ಪಿಕೊಳ್ಳಲೇಬೇಕು. ಅದರ ವಿವರವನ್ನು ಹೇಳ್ತೇವೆ ನೋಡಿ. ಚಿಕ್ಕಮಗಳೂರಿನ ಚಂದ್ರು ಎಂಬವರು ತಮ್ಮ ಮಗಳು ದೀಕ್ಷಿತಾ ಮದ್ವೆ ಆಮಂತ್ರಣ ಪತ್ರವನ್ನ ಸಂಬಂಧಿಕರಿಗೆ ಕೊಡೋದಕ್ಕೆ ತೆರಳಿರ್ತಾರೆ. ಈ ವೇಳೆ ತರೀಕೆರೆ ತಾಲೂಕಿನ ತಿಮ್ಮಾಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಚಂದ್ರು ದಾರುಣವಾಗಿ ಮೃತಪಟ್ಟಿರ್ತಾರೆ.
ಇತ್ತ ಮನೆಯಲ್ಲಿ ಮದ್ವೆಯ ಸಂಭ್ರಮ ಕಳೆಗಟ್ಟಿರುತ್ತೆ. ಮದುಮಗಳು ಕೂಡಾ ತಂದೆಯ ಬರುವಿಕೆಗಾಗಿ ಕಾಯ್ತಿರ್ತಾಳೆ. ಆದ್ರೆ ತಂದೆ ಮದ್ವೆ ಓಡಾಟದಲ್ಲಿ ಸುದ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಟ್ರೀಟ್ಮೆಂಟ್‌ ತಗೊಂಡು ಬರ್ತಾರೆ ಅಂತ ಮಗಳು ಹಾಗೂ ಚಂದ್ರುವಿನ ಪತ್ನಿಗೆ ತಿಳಿಸ್ತಾರೆ.


ತಾಳಿಕಟ್ಟಿಸಿಕೊಳ್ಳುವ ಶುಭ ಸಂದರ್ಭದಲ್ಲಿ ತಂದೆ ಜೊತೆಗಿಲ್ಲ ಅನ್ನುವ ದುಃಖದಲ್ಲೇ ಮದ್ವೆ ಕಾರ್ಯಕ್ರಮ ನಡೆಯುತ್ತೆ. ಆರತಕ್ಷತೆ ಕೂಡಾ ಆಗುತ್ತೆ. ಸಂಬಂಧಿಕರೆಲ್ಲ ಬಂದು ಹರಸಿ, ಆತಿಥ್ಯ ಸ್ವೀಕರಿಸಿ ತೆರಳ್ತಾರೆ. ಎಲ್ಲಾ ಮುಗಿದು ಇನ್ನೇನು ಮನೆಗೆ ಹೋಗ್ಬೇಕು ಅನ್ನುವಷ್ಟರಲ್ಲಿ ದೀಕ್ಷಿತಾಗೆ ವಿಚಾರ ತಿಳಿಸ್ತಾರೆ ಕುಟುಂಬಸ್ಥರು. ಆ ಕ್ಷಣಕ್ಕೆ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತೆ ಅವಳಿಗೆ. ತನ್ನೆಲ್ಲಾ ಸಂಭ್ರಮ ಆ ಕ್ಷಣದಲ್ಲಿ ಕಣ್ಣೀರ ಕೋಡಿಯಲ್ಲಿ ಮುಳುಗುತ್ತೆ. ಗೋಳಿಡುತ್ತಲೇ ಆಸ್ಪತ್ರೆಗೆ ಬಂದ ಮಗಳು ಅಪ್ಪ ಹೆಣವಾಗಿ ಮಲಗಿರೋದನ್ನ ಕಂಡು ದಿಕ್ಕು ತೋಚದಂತಾಗುತ್ತಾಳೆ. ಅಮ್ಮ-ಮಗಳ ಗೋಳಾಟ, ಆಕ್ರಂದನ ಮುಗಿಲುಮುಟ್ಟುತ್ತೆ. ಇದನ್ನೆಲ್ಲ ನೋಡುತ್ತಿದ್ದ ಜನರಿಗೆ ಏನು ಹೇಳಬೇಕು ಅನ್ನೋದೇ ತೋಚದಂತಾಗುತ್ತೆ. ತಾವು ಕೂಡಾ ಭಾವುಕರಾಗಿ ಕಣ್ಣೀರಾಗುತ್ತಾರೆ.
ಒಂದೆಡೆ ಅಪ್ಪನ ಕನಸಿನಂತೆ ವಿಘ್ನವಿಲ್ಲದೆ ನಡೆದ ಮದುವೆ. ಮತ್ತೊಂದೆಡೆ ಅಪ್ಪನ ಅನುಪಸ್ಥಿತಿಯಲ್ಲೇ, ಅಪ್ಪನಿಗೆ ಎದುರಾದ ದುರಂತರ ಅರಿವಿಲ್ಲದೆ ಸಪ್ತಪಡಿ ತುಳಿದ ಮಗಳು… ಇದೆಲ್ಲಾ ಯಾವ್ದೋ ಸಿನೆಮಾದ ಚಿತ್ರಣದಂತೆ ಅನ್ನಿಸಿದ್ರೂ, ವಾಸ್ತವತೆಯನ್ನ ನಾವು ಒಪ್ಪಿಕೊಳ್ಳಲೇಬೇಕು. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಈಗ ಆವರಿಸಿದೆ. ಮದುಮಗಳಿಗೆ ಸಾಂತ್ವನ ಹೇಳೋದ್ರಲ್ಲಿ ಎಲ್ಲರೂ ಇದ್ದಾರೆ. ಆದ್ರೆ ತನಗೆ ಸರ್ವಸ್ವವಾಗಿದ್ದ ಅಪ್ಪನ ಅಗಲುವಿಕೆಯ ನೋವಿನಲ್ಲಿ ಮಗಳು ಆಘಾತದಲ್ಲಿದ್ದಾಳೆ… ಎಂಥಾ ಭಾವನಾತ್ಮಕ ಸಂಗತಿ ಅಲ್ವಾ..!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!