ಚಿಕ್ಕಮಗಳೂರು : ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಕ್ರೌರ್ಯ ಮೆರೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಅಪ್ಪ ಅಮ್ಮ ಕೂಲಿ ಕೆಲಸಕ್ಕೆ ತೆರಳಿದ್ದು. ಈ ಸಮಯವನ್ನು ಸಾಧಿಸಿದ ೫೪ ವರ್ಷದ ಇಲ್ಯಾಸ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ನಾನು ದೂರದ ಸಂಬಂಧಿ ಎಂದು ಹೇಳಿಕೊಂಡು ಬಂದ ಇಲಿಯಾಸ್ ಬಾಲಕಿಯ ಮನೆಯಲ್ಲಿ ಯಾರು ಇಲ್ಲದ ಸನ್ನಿವೇಶ ಬಳಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಪೋಷಕರ ಬಳಿ ಹೇಳದಂತೆ ಬೆದರಿಕೆವೊಡ್ಡಿದ್ದಾನೆ. ಯಾರ ಜೊತೆಯಾದರು ಹೇಳಿದರೆ ಅವರನ್ನು ಹತ್ಯೆ ಮಾಡುತ್ತೇನೆಂದು ಹೆದರಿಸಿದ್ದಾನೆ. ಹೀಗಾಗಿ ಬಾಲಕಿ ಹೆದರಿ ವಿಷಯವನ್ನು ಮುಚ್ಚಿಟ್ಟಿದ್ದಾಳೆ. ಕಳೆದ ಎರಡು ದಿನಗಳ ಹಿಂದೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ತಪಾಸಣೆ ನಡೆಸಿದಾಗ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವ ವಿಷಯ ತಿಳಿದು ಬಂದಿದೆ. ವಿಚಾರ ತಿಳಿದ ಪೋಷಕರು ಕಂಗಾಲಾಗಿದ್ದಾರೆ.
ಬಾಲಕಿಯನ್ನು ವಿಚಾರಿಸಿದಾಗ ಕೆಲ ತಿಂಗಳ ಹಿಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆರೋಪಿ ಇಲಿಯಾಸ್‌ಗೆ ಎರಡು ಮದುವೆಯಾಗಿದೆ ಅನ್ನುವ ವಿಚಾರ ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರು ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ತೋರುಸ್ತೀವಿ, ಹಣ ಕೊಡ್ತೀವಿ ಕೇಸ್ ವಾಪಸ್ ತೆಗೆದುಕೊಳ್ಳಿ ಅಂತ ಆಮಿಷವೊಡ್ಡುತ್ತಿದ್ದಾರಂತೆ. ಇಲಿಯಾಸ್ ಪತ್ನಿಯರ ಕಿರುಕುಳದಿಂದ ನೊಂದು ಮಗಳಿಗೆ ನ್ಯಾಯ ಕೊಡಿಸಿ ಎಂದು ಬಾಲಕಿ ಪೊಲೀಸರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಇಲಿಯಾಸ್ ನಾಪತ್ತೆಯಾಗಿದ್ದಾನೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಹೆಂಡಿರ ಕಾಮುಕ ಗಂಡ..! – ತಡವಾಗಿ ಬೆಳಕಿಗೆ ಬಂದ ಹೇಯ ಕೃತ್ಯ..!
RELATED ARTICLES