ತುಮಕೂರು : ಆಯಿಲ್ ಟ್ಯಾಂಕ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದ ಪರಿಮಳ ಆಗ್ರೋ ಫುಡ್ ಇಂಡಸ್ಟ್ರಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸಂತೋಷ್ ಹಾಗೂ ಚಂದನ್ ಶರ್ಮ ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪರಿಮಳ ಆಗ್ರೋ ಫ್ಯಾಕ್ಟರಿಯಲ್ಲಿ ಬತ್ತದ ಹೊಟ್ಟಿನಿಂದ ಎಣ್ಣೆ ತೆಗೆಯಲಾಗುತ್ತೆ. ಐವರು ಕಾರ್ಮಿಕರು ಆಯಿಲ್ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಟ್ಯಾಂಕ್ ಬ್ಲಾಸ್ಟ್ ಆಗಿದೆ. ಸ್ಪೋಟದ ರಭಸಕ್ಕೆ ಇಬ್ಬರು ಕಾರ್ಮಿಕರು ಸ್ಥಳದಕ್ಕೇ ಮೃತಪಟ್ಟಿದ್ದಾರೆ. ತುಮಕೂರು ಎಸ್ಪಿ ಕೆ.ವಿ. ಅಶೋಕ್, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯಿಲ್ ಟ್ಯಾಂಕ್ ಸ್ಪೋಟ – ಬಿಹಾರ ಮೂಲದ ಇಬ್ಬರು ಕಾರ್ಮಿಕರ ದುರ್ಮರಣ..!
RELATED ARTICLES