ಹಾಸನ : ಜಿಲ್ಲೆಯ ಸಕಲೇಶಪುರ, ಬೇಲೂರು ಭಾಗದಲ್ಲಿ ಕಾಡಾನೆಗಳು ಯಥೇಚ್ಛವಾಗಿದೆ. ಆಗಾಗ್ಗೆ ದಾಳಿ ಮಾಡುತ್ತಾ ತಮ್ಮ ಅಟ್ಟಹಾಸ ಮೆರೆಯುವ ಆನೆಗಳು ಅಪರೂಪಕ್ಕೆಂಬಂತೆ ಹಿಂಡುಹಿಂಡಾಗಿ ಜನರೆದುರು ಬರುತ್ತವೆ. ಇಪ್ಪತ್ತೈದು ಆನೆಗಳು ಏಕಕಾಲದಲ್ಲಿ ರಸ್ತೆ ದಾಟುವ ಚಿತ್ರಣವೊಂದು ಕಂಡಿದೆ.
ಬೇಲೂರು ತಾಲೂಕಿನ ತಗರೆ ಗ್ರಾಮದಲ್ಲಿ ಈ ದೃಶ್ಯಕಂಡಿದ್ದು, ಗುಂಪುಗುಂಪಾಗಿ ೨೫ ಆನೆಗಳು ಆತುರಾತುರದಲ್ಲಿ ರಸ್ತೆ ದಾಟಿವೆ. ಆನೆಗಳು ರಸ್ತೆ ದಾಟುವ ವೇಳೆ ವಾಹನ ಸವಾರರು ದೂರದಲ್ಲಿ ತಮ್ಮ ವಾಹನಗಳನ್ನ ನಿಲ್ಲಿಸಿದ್ದರು. ಎಷ್ಟು ಆನೆಗಳಿರಬಹುದು ಅಂತ ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತಾ ಆನೆಗಳನ್ನ ಲೆಕ್ಕಹಾಕಿದ್ದಾರೆ ಅಲ್ಲಿದ್ದವರು.
ಒಂದು ಬದಿಯಿದ ಮತ್ತೊಂದು ಬದಿಗೆ ಧೂಳೆಬ್ಬಿಸುತ್ತಾ ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟಿದೆ ಗಜಪಡೆ. ಆನೆಗಳು ತೋಟಕ್ಕೆ ಬಂದಿರುವ ಬಗ್ಗೆ ಮಾಹಿಸಿ ಸಿಕ್ಕ ಕೆಲಸ ಕಾರ್ಮಿಕರು ತೋಟದಿಂದ ವಾಪಸ್ಸಾಗಿದ್ದಾರೆ. ಈ ಆನೆಗಳಿಂದ ಯಾವಾಗ ನಮಗೆ ಮುಕ್ತಿ ಕೊಡಿಸುತ್ತಪ್ಪಾ ಸರ್ಕಾರ ಅಂತ ಜನ ಶಪಿಸುತ್ತಿದ್ದಾರೆ.
ಒಂದಲ್ಲ, ಎರಡಲ್ಲ, ಮೂರಲ್ಲ..! ಬರೋಬ್ಬರಿ ಇಪ್ಪತ್ತೈದು ಆನೆಗಳು ಏಕಕಾಲದಲ್ಲಿ ರೋಡ್ ಕ್ರಾಸ್..! ಅಬ್ಬಬ್ಬಾ…!
RELATED ARTICLES