ಗದಗ : ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಸಮಾವೇಶದಲ್ಲಿ ಸಂಸದೆ ಪ್ರಿಯಾಂಕ ಗಾಂಧಿಯನ್ನು ಕಿತ್ತೂರ ರಾಣಿ ಚೆನ್ನಮ್ಮಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೋಲಿಸಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ. ವಿವಿಧ ಕ್ಷೇತ್ರದ ಪ್ರಮುಖರು ಈ ಹೇಳಿಕೆಗೆ ಆಕ್ಷೇಪ ಹೊರಹಾಕುತ್ತಿದ್ದಾರೆ.
ಯಾರನ್ನೂ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಕೆ ಮಾಡಬಾರದು. ಚೆನ್ನಮ್ಮಳ ಕಾಲಿನ ಧೂಳಿಗೂ ಯಾರೂ ಸಮ ಇಲ್ಲ ಎಂದು ಬಸವ ಜಯಮೃತ್ಯುಂಜಯ ಶ್ರೀ ಆಕ್ರೋಶ ಹೊರಹಾಕಿದ್ದಾರೆ. ಚೆನ್ನಮ್ಮ ಬ್ರಿಟಿಷರನ್ನ ಹಿಮ್ಮೆಟ್ಟಿಸಿದ ವೀರರಾಣಿ. ಆಕೆಯನ್ನು ಯಾರಿಗೂ ಹೋಲಿಸಬಾರದು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ನಮ್ಮ ಮೀಸಲಾತಿ ಹೋರಾಟ ಸಂವಿಧಾನ ವಿರೋಧಿ ಎಂದಿದ್ದಾರೆ. ಆ ರೀತಿ ಹೇಳಿ ಪಂಚಮಸಾಲಿ ಸಮಾಜವನ್ನು ಹೀಯಾಳಿಸಿದ್ದಾರೆ. ಸಿಎಂ ನಡೆಯಿಂದ ನಮ್ಮ 8ನೇ ಹಂತದ ಹೋರಾಟ ಆರಂಭ ಮಾಡಲಾಗಿದೆ. ಲಾಠಿಚಾರ್ಜ್‌ಗೆಲ್ಲ ನಮ್ಮ ಸಮುದಾಯ ಹೆದರುವುದಿಲ್ಲ. ಲಾಠಿ ಚಾರ್ಜ್ ಒಳಗಾದವರಿಗೆ ‘ಪಂಚಮಸಾಲಿ ವೀರ’ ಎನ್ನುವ ಬಸವ ರಕ್ಷಣೆ ನೀಡಲಾಗುತ್ತದೆ ಎಂದು ತಿರುಗೇಟು ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮಳ ಕಾಲಿನ ಧೂಳಿಗೂ ಯಾರೂ ಸಮ ಇಲ್ಲ – ಬಸವ ಜಯಮೃತ್ಯುಂಜಯ
RELATED ARTICLES