Wednesday, February 11, 2026
Homebig breakingಗೃಹಪ್ರವೇಶಕ್ಕೂ ಅವಕಾಶ ನೀಡದೆ ಮನೆ ಸೀಜ್‌ ಮಾಡಿದ ಮೈಕ್ರೋ ಫೈನಾನ್ಸ್‌ ಸಂಸ್ಥೆ - ಕೊಟ್ಟಿಗೆಯಲ್ಲಿ ದಿನ...

ಗೃಹಪ್ರವೇಶಕ್ಕೂ ಅವಕಾಶ ನೀಡದೆ ಮನೆ ಸೀಜ್‌ ಮಾಡಿದ ಮೈಕ್ರೋ ಫೈನಾನ್ಸ್‌ ಸಂಸ್ಥೆ – ಕೊಟ್ಟಿಗೆಯಲ್ಲಿ ದಿನ ಕಳೆಯುತ್ತಿರುವ ಕುಟುಂಬ..!

ಹಾಸನ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಇನ್ನೂ ನಿಂತಿಲ್ಲ. ಹಾಸನ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆ ಸಾಲ ಮರುಪಾವತಿ ಮಾಡದ ವ್ಯಕ್ತಿಯೊಬ್ಬರ ಮನೆಗೆ ಬೀಗ ಜಡಿದ ಬೆಳವಣಿಗೆ ಬೆಳಕಿಗೆ ಬಂದಿದೆ.
ಮನೆ ನಿರ್ಮಾಣಕ್ಕೆಂದು ದೊಡ್ಡ ಆಲದಹಳ್ಳಿ ಗ್ರಾಮದ ಮಂಜೇಗೌಡ ಎಂಬವರು 9 ಲಕ್ಷ ಸಾಲ ಮಾಡಿದ್ದರು. ಆದರೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣಕ್ಕೆ ಫೈನಾನ್ಸ್‌ ಸಂಸ್ಥೆಯವರು ಮನೆಗೆ ಬೀಗ ಹಾಕಿದ್ದಾರೆ. ೬ ತಿಂಗಳ ಹಿಂದೆಯೇ ಬೀಗ ಹಾಕಿದ್ದು, ಇತ್ತ ಮನೆಯಲ್ಲಿ ವಾಸವಿರಲಾಗದೆ ಕೊಟ್ಟಿಗೆಯಲ್ಲಿ ಕುಟುಂಬ ಜೀವನ ನಡೆಸುವಂತಾಗಿದೆ.
ಹೊಸ ಮನೆ ನಿರ್ಮಾಣಕ್ಕೆ ಸಾಲ ಮಾಡಿದ್ದರು. ಮನೆ ನಿರ್ಮಾಣ ಮಾಡಿದ ನಂತರ ಗೃಹಪ್ರವೇಶವನ್ನೂ ಮಾಡೋದಕ್ಕೆ ಫೈನಾನ್ಸ್‌ ಸಂಸ್ಥೆ ಬಿಡಲಿಲ್ಲ. ಮನೆ ನಿರ್ಮಾಣ ವೇಳೆ ಮಗನಿಗೆ ಅಪಘಾತವಾಗಿ ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ ಅಂತ ಮನೆಯವರು ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕರುಣೆ ತೋರದೆ ಮನೆ ಸೀಜ್‌ ಮಾಡಿದ್ದಾರೆ. ಗೃಹಪ್ರವೇಶಕ್ಕೂ ಅವಕಾಶ ಮಾಡಿಕೊಡದ ಸಂಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!