ಹಾಸನ : ನಗರದಲ್ಲಿ ಕಳ್ಳರು ಕರಾಮತ್ತು ಮೆರೆದಿದ್ದಾರೆ. ಜಾವಾ ಬೈಕ್ ಶೋರೂಮ್‌ಗೆ ನುಗ್ಗಿದ ಕಳ್ಳರು ಹಣ, ಬಟ್ಟೆಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಶೋರೂಂನ ಗಾಜುಗಳನ್ನು ಒಡೆದು ಒಳ ನುಗ್ಗಿದ ಕಳ್ಳರು 1.29 ಲಕ್ಷ ರೂ ಹಣ ಎಗರಿಸಿದ್ದಾರೆ. ಜೊತೆಗೆ ನ್ಯೂ ಟ್ರೆಂಡಿ ಟೀ ಶರ್ಟ್‌ಗಳನ್ನ ಕದ್ದೊಯ್ದಿದ್ದಾರೆ. ಗಾಜು ಒಡೆಯುವ ವೇಳೆ ಗಾಯವಾಗಿದ್ರೂ, ರಕ್ತ ಸುರಿಸಿಕೊಂಡೇ ಕಳ್ಳತನ ಮುಂದುವರೆಸಿದ್ದಾರೆ. ಒಳಗೆಲ್ಲಾ ತಡಕಾಡಿದ್ದು, ಸಿಕ್ಕ ಹಣವನ್ನು ಕದ್ದೊಯ್ದಿದ್ದಾರೆ. ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಶೋರೂಂ ಮಾಲೀಕ ನವಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಾವಾ ಬೈಕ್ ಶೋರೂಂನಲ್ಲಿ ಕಳ್ಳತನ – ರಕ್ತ ಸುರಿಸಿಕೊಂಡೇ ಹಣ, ಬ್ರಾಂಡೆಡ್ T-shirt ದೋಚಿದ ಕಳ್ಳರು..!
RELATED ARTICLES