ವಾಷಿಂಗ್ಟನ್ : ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದಾಗಿದೆ. ಟ್ರಂಪ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಮೆರಿಕಾದಲ್ಲಿರುವ ಭಾರತೀಯರು ಆತಂಕಗೊಂಡಿದ್ದಾರೆ. ಅದರಲ್ಲೂ ಮಕ್ಕಳನ್ನು ಪಡೆಯುವ ಖುಷಿಯಲ್ಲಿರುವ ದಂಪತಿ ಹೆಚ್ಚು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ತುಂಬು ಗರ್ಭಿಣಿಯಾಗಿರುವವರು ಶೀಘ್ರವಾಗಿ ಹೆರಿಗೆ ಮಾಡಿಸಿಕೊಳ್ಳೋದಕ್ಕೆ ಮುಂದಾಗುತ್ತಿದ್ದಾರೆಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಇದಕ್ಕೆ ಕಾರಣ ಏನು ಗೊತ್ತಾ. ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹಲವು ಕಡತಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ʼಜನ್ಮ ಸಿದ್ಧ ಪೌರತ್ವ ಹಕ್ಕು ರದ್ದತಿʼ ಕೂಡಾ ಒಂದು. ಇದರಿಂದಾಗಿ ಬೇಗ ಮಕ್ಕಳನ್ನು ಪಡೆಯೋದಕ್ಕಾಗಿ ಭಾರತೀಯರು ಹಾತೊರೆಯುತ್ತಿದ್ದಾರಂತೆ.
ಈ ಮೊದಲು ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ಪೌರತ್ವ ದೊರೆಯುತ್ತಿತ್ತು. ಈ ನಿಯಮ ಫೆ.20ಕ್ಕೆ ಕೊನೆಯಾಗಲಿದೆ. ನಂತರದ ಜನಿಸುವ ಮಕ್ಕಳು ಅಲ್ಲಿನ ಪೌರತ್ವ ಪಡೆಯಬೇಕಾದ್ರೆ ಹಲವು ವರ್ಷಗಳ ಕಾಯಲೇಬೇಕು.
ಈ ಕಾರಣಕ್ಕೆ ಫೆ.೧೯ಕ್ಕೆ ಮೊದಲೇ ಹೆರಿಗೆ ಮಾಡಿಸಿಕೊಳ್ಳೋದಕ್ಕೆ ಅನೇಕ ಮಹಿಳೆಯರು ಮುಂದಾಗಿದ್ದಾರೆ. ಸಹಜ ಹೆರಿಗೆ ಅಲ್ಲದಿದ್ದರೂ ಸಿಸೇರಿಯನ್ ಮಾಡಿಸೋದಕ್ಕೆ ಆಸಕ್ತಿ ಹೊಂದುತ್ತಿದ್ದಾರೆ ಅಂತ ಅಲ್ಲಲಿನ ವೈದ್ಯರು ಹೇಳುತ್ತಿದ್ದಾರೆ. ಅವಧಿ ಪೂರ್ವ ಹೆರಿಗೆ ತಾಯಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನುವ ಅರಿವಿದ್ದರೂ ಈ ರೀತಿಯ ನಡೆ ಅಚ್ಚರಿ ಮೂಡಿಸಿದೆ.
