ಎನ್ ಆರ್ ಪುರ : ಡೈನಾಮೈಟ್ ಸ್ಪೋಟಿಸಿದ ಪರಿಣಾಮ ಬಂಡೆ ಸಿಡಿದು ಮನೆಗಳ ಮೇಲೆ ಕಲ್ಲು ಬಿದ್ದು ಭಾರಿ ಪ್ರಮಾಣದ ಅನಾಹುತವೊಂದು ತಪ್ಪಿದೆ.
ಈ ಘಟನೆ ಆಗಿರೋದು ಎನ್.ಆರ್. ಪುರ ತಾಲೂಕಿನ ಸಾತ್ಕೋಳಿ ಗ್ರಾಮದಲ್ಲಿ. ಭದ್ರಾ ಮೇಲ್ದಂಡೆ ನಾಲೆ ಕಾಮಗಾರಿ ಸಂಬಂಧಿತವಾಗಿ ರಾತ್ರಿ ವೇಳೆ ಡೈನಾಮೈಟ್ ಸ್ಪೋಟಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸ್ಪೋಟಗೊಂಡ ಪರಿಣಾಮ ಕಲ್ಲಿನ ತುಂಡುಗಳು ಛಿದ್ರವಾಗಿ 10ಕ್ಕೂ ಹೆಚ್ಚು ಮನೆಗಳ ಮೇಲೆ ಬಿದ್ದಿದೆ. ಮನೆಯ ಹೆಂಚುಗಳು ಪುಡಿಪುಡಿಯಾಗಿದ್ದು, ಮನೆಯೊಳಗೆ ಕಲ್ಲಿನ ತುಂಡುಗಳು ಬಿದ್ದಿವೆ. ಬಾಣಂತಿ ಹಾಗೂ ಮಗು ಇದ್ದ ಮನೆ ಮೇಲೂ ಬಿದ್ದಿದ್ದು, ಇಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಭದ್ರಾ ಡ್ಯಾಮ್‌ನಿಂದ ಚಿತ್ರದುರ್ಗ, ತುಮಕೂರು, ಕೋಲಾರಕ್ಕೆ ನೀರೊದಗಿಸುವ ಯೋಜನೆ ಇದಾಗಿದೆ. ನಾಲೆ ಸಾಗುವ ಮಾರ್ಗದಲ್ಲಿ ಅಡ್ಡಿಯಾಗಿರುವ ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆಯಲಾಗುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
ಡೈನಾಮೈಟ್ ಬಳಸಿ ಬಂಡೆ ಸ್ಪೋಟ – ಮನೆಗಳ ಮೇಲೆ ಬಿದ್ದ ಕಲ್ಲಿನ ತುಂಡುಗಳು – ಮಗು, ಬಾಣಂತಿ ಅಲ್ಪದರಲ್ಲೇ ಪಾರು..!
RELATED ARTICLES