ಹಾಸನ : ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಾವ-ಸೊಸೆ ಮೃತಪಟ್ಟಿರುವ ಘಟನೆ ಅರಸೀಕೆರೆ ತಾಲೂಕಿನ ಯಾದಪುರ ಬೈಪಾಸ್‌ನಲ್ಲಿ ನಡೆದಿದೆ.
ಗಂಗಾಧರ ನಾಯಕ(50), ಪ್ರಿಯ(20) ಮೃತ ದುರ್ದೈವಿಗಳು. ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತಿದ್ದ ಟಾಟಾ ನಿಕ್ಸಾನ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಗಂಗಾಧರ ನಾಯಕ ಹಾಗೂ ಪ್ರಿಯ ಅರಸೀಕೆರೆಯಿಂದ ಮುರುಂಡಿ ಕಡೆಗೆ ತೆರಳುತ್ತಿದ್ದರು. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ – ಮಾವ, ಸೊಸೆ ಸ್ಥಳದಲ್ಲೇ ಕೊನೆಯುಸಿರು..!
RELATED ARTICLES
