Wednesday, February 11, 2026
Homebig breakingನಡುಬೀದಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿಗಳ ಹೊಡೆದಾಟ - ಹೆಲ್ಮೆಟ್‌, ಬೆಲ್ಟ್‌ ಹಿಡಿದು ಸಿನಿಮೀಯ ಶೈಲಿಯಲ್ಲಿ ಫೈಟಿಂಗ್..!‌

ನಡುಬೀದಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿಗಳ ಹೊಡೆದಾಟ – ಹೆಲ್ಮೆಟ್‌, ಬೆಲ್ಟ್‌ ಹಿಡಿದು ಸಿನಿಮೀಯ ಶೈಲಿಯಲ್ಲಿ ಫೈಟಿಂಗ್..!‌

ಹಾಸನ : ಕಾಲೇಜಿಗೆ ಹೋಗಿ ಶಿಕ್ಷಣ, ಆಟೋಟದಲ್ಲಿ ತೊಡಗಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಘಟನೆ ಹಾಸನದ ಕೆ.ಆರ್.‌ ಪುರಂನಲ್ಲಿ ನಡೆದಿದೆ.
ಹಾಸನದಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ನಡು ಬೀದಿಯಲ್ಲಿ ಹೊಡೆದಾಡಿಕೊಂಡವರು. ಕ್ಷುಲ್ಲಕ ವಿಚಾರಕ್ಕೆ ಗಲಾಟ ನಡೆದಿದ್ದು, ಹೆಲ್ಮೆಟ್‌, ಬೆಲ್ಟ್‌ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಮಾರಾಮಾರಿಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಿನಿಮಾ ಸ್ಟೈಲ್‌ನಲ್ಲಿ ವಿದ್ಯಾರ್ಥಿಗಳ ಫೈಟಿಂಗ್‌ ನೋಡಿದ ಜನ ಇವರೆಂಥಾ ವಿದ್ಯಾರ್ಥಿಗಳಪ್ಪಾ ಅಂತ ಮಾತನಾಡಿಕೊಳ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!