ಬಳ್ಳಾರಿ : ನನಗೆ ಪಕ್ಷ ತಾಯಿ ಇದ್ದಂತೆ, ನಾನು ಪಕ್ಷಕ್ಕೆ ಯಾವತ್ತೂ ದ್ರೋಹ ಬಗೆಯಲ್ಲ ಅಂತ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆದ ಘಟನೆ ಹಾಗೂ ಜನಾರ್ದನ ರೆಡ್ಡಿ ವಾಗ್ದಾಳಿ ವಿಚಾರವಾಗಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಾದಿಬೀದಿಯಲ್ಲಿ ಓಡಾಡುವವನಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ವರಿಷ್ಠರನ್ನ ಭೇಟಿಯಾಗಿ ಅವರ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳುತ್ತೇನೆ. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಆ ವಿಶ್ವಾಸಕ್ಕೆ ದ್ರೋಹ ಮಾಡೋದಿಲ್ಲ ಎಂದರು.
ನಾನು ಚುನಾವಣೆಯಲ್ಲಿ ಹೇಗೆ ಗೆದ್ದಿದ್ದೇನೆ ಅಂತ ಜನರಿಗೆ ಗೊತ್ತಿದೆ. ಜನಾರ್ದನ ರೆಡ್ಡಿ ಮ್ಯಾಜಿಕ್ ಮಾಡಿ ಗೆಲ್ಸಿದ್ರಾ ಎಂದು ವ್ಯಂಗ್ಯವಾಡಿದ ರಾಮುಲು, ನಾನು ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಆದ್ರೆ ಜನರ ಮನಸ್ಸಲ್ಲಿದ್ದೇನೆ ಎಂದು ತಿರುಗೇಟು ಕೊಟ್ರು.
ಯಾರಿಂದಲೂ ಯಾರೂ ಬೆಳೆದಿಲ್ಲ. ನನಗೆ ರಾಜಕೀಯ ಹಿನ್ನೆಲೆ ಇದೆ. ನನ್ನಿಂದಾಗಿ ರಾಮುಲು ಬೆಳೆದ ಅನ್ನೋದನ್ನ ನಂಬುವಷ್ಟು ದಡ್ಡರಲ್ಲ ಜನ. ನನ್ನ ರಾಜಕೀಯ ಜೀವನ ಯಾವೊಂದು ಕಪ್ಪು ಚುಕ್ಕೆ ಇಲ್ಲದೆ ಸಾಗಿ ಬಂದಿದೆ. ಯಾವ ಕ್ರಿಮಿನಲ್ ಕೇಸ್ ಕೂಡಾ ನನ್ನ ಮೇಲಿಲ್ಲ ಅಂತ ಜನಾರ್ದನ ರೆಡ್ಡಿಗೆ ಕೌಂಟರ್ ಅಟ್ಯಾಕ್ ಮಾಡಿದ್ರು.
