ಪ್ರಯಾಗ್‌ರಾಜ್ : ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ದೇಶ ವಿದೇಶಗಳ ಕೋಟ್ಯಂತರ ಭಕ್ತರು ಕುಂಭ ಸ್ನಾನ ಮಾಡುತ್ತಿದ್ದಾರೆ. ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಕೂಡಾ ಮಹಾಕುಂಭದಲ್ಲಿ ಭಾಗಿಯಾಗಿ ತೀರ್ಥ ಸ್ನಾನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಬೆಳಗ್ಗೆ 10:45ಕ್ಕೆ ಏರಿಯಲ್ ಘಾಟ್‌ಗೆ ಆಗಮಿಸಿದರು. ಬಳಿಕ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೋದಿಗೆ ಸಾಥ್ ನೀಡಿದರು. ಮಹಾಕುಂಭ ಮೇಳಕ್ಕಾಗಿ ಮಾಡಿರುವ ವ್ಯವಸ್ಥೆ ಬಗ್ಗೆ ಯೋಗಿ ವಿವರಿಸಿದರು. ೧೧.೨೦ಕ್ಕೆ ಮೋದಿ ಸಂಗಮ ಸ್ನಾನ ಮಾಡಿದರು. ಸೂರ್ಯದೇವನಿಗೆ ನಮಿಸಿ ನದಿಯಲ್ಲಿ ಮುಳುಗೆದ್ದರು.


