Advertisement

Homebig breakingಮಗನ ಮದುವೆಯಂದೇ ತಾಯಿ ಕೊನೆಯುಸಿರು - ಅವರ ಇಚ್ಛೆಯಂತೆ ದೇಹದಾನ ಮಾಡಿದ ಕುಟುಂಬಸ್ಥರು

ಮಗನ ಮದುವೆಯಂದೇ ತಾಯಿ ಕೊನೆಯುಸಿರು – ಅವರ ಇಚ್ಛೆಯಂತೆ ದೇಹದಾನ ಮಾಡಿದ ಕುಟುಂಬಸ್ಥರು

ಕುಶಾಲನಗರ(ಕೊಡಗು) : ಮಗನ ಮದುವೆ ದಿನವೇ ತಾಯಿ ಮೃತಪಟ್ಟ ಮನಮಿಡಿಯುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ ಲಲಿತ(67) ಮೃತ ಮಹಿಳೆ. ಹಲವು ವರ್ಷಗಳಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಾನು ಮೃತಪಟ್ಟ ನಂತರ ನನ್ನ ದೇಹವನ್ನು ದಾನ ಮಾಡುವಂತೆ ಕುಟುಂಬಸ್ಥರಿಗೆ ಮೊದಲೇ ತಿಳಿಸಿದ್ದರು. ಇಂದು ಅವರು ಕೊನೆಯುಸಿರೆಳೆದಿದ್ದು, ಅವರ ದೇಹವನ್ನು ಮಡಿಕೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಲಾಗಿದೆ. ಇವರ ಪತಿ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದು, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ.
ಇಂದು ಇವರ ಮಗಳ ಮದುವೆಯ ಶುಭ ಸಮಾರಂಭದೇ ಕೊನೆಯುಸಿರೆಳೆದಿದ್ದಾರೆ. ದುಃಖದ ನಡುವೆಯೇ ಸಮಾಜಮುಖಿ ಕಾರ್ಯದಲ್ಲಿ ಲಲಿತಾ ಮತ್ತು ಕುಟುಂಬಸ್ಥರು ಗುರುತಿಸಿಕೊಂಡು ಮಾದರಿ ಎನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!