ಬೆಂಗಳೂರು : ರಸ್ತೆ ಮಧ್ಯೆ ಪೆಂಡಾಲ್ ಹಾಕಿದ ವಿಚಾರವಾಗಿ ಯುವಕರ ತಂಡ ಮತ್ತು ಲಾಯರ್ ಜಗದೀಶ್ ನಡುವೆ ಗಲಾಟೆ ನಡೆದು ಯುವಕರು ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಜಗದೀಶ್ ಮೇಲೆ ಮತ್ತೊಮ್ಮೆ ದಾಳಿಯಾಗಿದೆ.
ಫೇಸ್‌ಬುಕ್‌ನಲ್ಲಿ ಲೈವ್ ಬಂದ ಜಗದೀಶ್ ತನ್ನನ್ನು ಕೊಲೆ ಮಾಡಲು ಸಂಚು ಹಾಕಿದ್ದಾರೆಂದು ಆರೋಪಿಸಿದ್ದಾರೆ. ಮೂಗು, ಬಾಯಿಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ನಡೆದಿದೆ. 500ಕ್ಕೂ ಹೆಚ್ಚು ಜನರು ನನ್ನ ಹಾಗೂ ಕುಟುಂಬದ ಮೇಲೆ ದಾಳಿ ಮಾಡಿದ್ದು, ಗನ್ ಮ್ಯಾನ್‌ಗೂ ಮಾರಕಾಸ್ತ್ರದಿಂದ ಹೊಡೆದಿದ್ದಾರೆಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಸತ್ತು ಹೋಗಿದೆ. ನನ್ನ ಪ್ರಾಣ ಹೋದ್ರೂ ನನ್ನ ನಿಲುವು ಚೇಂಜ್ ಆಗಲ್ಲ ಅಂತ ಮತ್ತೊಮ್ಮೆ ತನ್ನ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಇಂದು ಬೆಳಗ್ಗೆ ವೀಡಿಯೋ ಹಂಚಿಕೊಂಡಿದ್ದ ಜಗದೀಶ್, ದರ್ಶನ್ ಫ್ಯಾನ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಿನ್ನೆಯ ಘಟನೆ ವೇಳೆ ನನ್ನ ಗನ್ ಮ್ಯಾನ್ ಇರಲಿಲ್ಲ. ಇದ್ದಿದ್ರೆ ಗುಂಡಿನ ಸದ್ದು ಕೇಳಿಸ್ತಿತ್ತು ಅಂತ ಅಬ್ಬರಿಸಿದ್ರು. ಇಂದು ಗನ್‌ಮ್ಯಾನ್ ಸಮ್ಮುಖದಲ್ಲೇ ಜಗದೀಶ್ ಮೇಲೆ ದಾಳಿ ನಡೆದಿದೆ.
