ಉಡುಪಿ : 20 ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಶರಣಾಗಿದ್ದಾರೆ. ಇಂದು ಉಡುಪಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು.
ಈಕೆ ಉಡುಪಿ ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿಯಾಗಿದ್ದರು. ಇದೀಗ ಶರಣಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಆಂಧ್ರ ಪ್ರದೇಶದಲ್ಲಿ ಪತಿ, ಮಕ್ಕಳೊಂದಿಗೆ ವಾಸವಿದ್ದ ಲಕ್ಷೀ, ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ. ಸಹೋದರ ವಿಠಲ ಪೂಜಾರಿ, ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ ಆಕೆ ಜೊತೆಗಿದ್ದರು. ಎಸ್ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು
ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಉಡುಪಿ ಡಿವೈಎಸ್ಪಿ ಡಿಟಿ ಪ್ರಭು, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಜರಿದ್ದರು.
ಕಳೆದ ತಿಂಗಳು ೬ ಮಂದಿ ನಕ್ಸಲರು ಶರಣಾಗಿದ್ದು, ನಿನ್ನೆ ರವೀಂದ್ರ ಚಿಕ್ಕಮಗಳೂರಿನಲ್ಲಿ ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದ. ಜೊತೆಗೆ ಲಕ್ಷ್ಮೀ ಕೂಡಾ ಶೀಘ್ರದಲ್ಲಿ ಶರಣಾಗಲಿದ್ದಾರೆ ಅಂತ ಸರ್ಕಾರ ಹೇಳಿತ್ತು. ಇಂದು ಅವರು ಕೂಡಾ ಶರಣಾಗಿದ್ದಾರೆ. ಈಕೆ ವಿರುದ್ಧ ಅಮಾಸೆಬೈಲ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ಇದೆ ಎಂದು ತಿಳಿದುಬಂದಿದೆ.
ಶಸ್ತ್ರ ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಶರಣಾದ ನಕ್ಸಲ್ ನಾಯಕಿ ತೊಂಬಟ್ಟು ಲಕ್ಷ್ಮೀ
RELATED ARTICLES