ಪ್ರಯಾಗ್‌ರಾಜ್ : ಕರ್ನಾಟಕದ ಜನಪ್ರತಿಯ ನಿರೂಪಕಿ ಅನುಶ್ರೀ ನಡೆಸಿಕೊಡುವ ಜೀ ಕನ್ನಡದ ಸರಿಗಮಪದಲ್ಲಿ ಈ ವಾರ ಅವರು ಕಾಣಿಸಿಕೊಂಡಿರಲಿಲ್ಲ. ಅವರ ಬದಲು ಮಾಸ್ಟರ್ ಆನಂದ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಅನುಶ್ರೀ ಗೈರಿನ ವಿಚಾರವಾಗಿ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿದ್ದವು. ಆದ್ರೆ ಅನುಶ್ರೀ ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಯಾವುದಕ್ಕೂ ಉತ್ತರ ಕೊಟ್ಟಿರಲಿಲ್ಲ.

ಅನುಶ್ರೀ ಜೀ ಕನ್ನಡಗೆ ರಾಜೀಮಾನೆ ಕೊಟ್ಟಿದ್ದಾರಂತೆ, ಅನುಶ್ರೀ ಮದ್ವೆ ಆಗ್ತಿದ್ದಾರಂತೆ, ಅನುಶ್ರೀ ಮದ್ವೆ ಶಾಪಿಂಗ್‌ಗೆ ಹೋಗಿದ್ದಾರಂತೆ, ಫಾರಿನ್ ಟೂರ್ ಹೋಗಿದ್ದಾರಂತೆ… ಹೀಗೆ ಅಂತೆಕಂತೆಗಳ ಸರಮಾಲೇಯೇ ಬೆಳೆದಿತ್ತು. ಈ ನಡುವೆ ಅನುಶ್ರೀ ಉತ್ತರ ಭಾರತದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅನುಶ್ರೀ ಪಾಲ್ಗೊಂಡು ತೀರ್ಥಸ್ನಾನ ಮಾಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೇಶ ವಿದೇಶದ ಕೋಟ್ಯಂತರ ಭಕ್ತರು ಭಾಗಿಯಾಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ತಾರೆಯರ ಗ್ಯಾಂಗ್ ಕೂಡಾ ಅಲ್ಲಿಗೆ ತೆರಳಿದೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆಗೆ ಅನುಶ್ರೀ ಕೂಡಾ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾದ ಕೆಲವು ಫೋಟೋಗಳನ್ನು ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಹಂಚಿಕೊಂಡಿದ್ದಾರೆ.
