ಬೆಂಗಳೂರು : ಐತಿಹಾಸಿಕ ಕುಂಭಮೇಳಕ್ಕೆ ದೇಶವಿದೇಶಗಳಿಂದ ಕೋಟ್ಯಂತರ ಮಂದಿ ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ನಡುವೆ ಅಲ್ಲಿನ ಅನೇಕ ಅಪರೂಪದ ಸಂಗತಿಗಳು ಸಖತ್ ಸುದ್ದಿ ಮಾಡುತ್ತಿವೆ. ಅದರಲ್ಲೂ ಕಳೆದೊಂದು ವಾರದಿಂದ ರುದ್ರಾಕ್ಷಿ ಮಾಲೆ ಮಾರುವ ಮೋನಾಲಿಸಾ ಎಂಬ ಯುವತಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾಳೆ.
ಸ್ಥಳೀಯ ಮಾಧ್ಯಮಗಳಿಂದ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು, ಯೂಟ್ಯೂಬರ್ಸ್ ಕೂಡಾ ಅವಳ ಕುರಿತಾಗಿ ಸುದ್ದಿ ಮಾಡುತ್ತಿದ್ದಾರೆ. 16 ವರ್ಷದ ಬಾಲಕಿ, ತನ್ನ ಆಕರ್ಷಕ ಕಣ್ಣುಗಳ ಮೂಲಕ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಆಕೆ ಕುರಿತಾದ ಸುದ್ದಿಗಳು, ರೀಲ್ಸ್‌ಗಳು ವೈರಲ್ ಆಗುತ್ತಿದ್ದಂತೆ ಕುಂಭಮೇಳ ಯಾವ ವಿಚಾರದಲ್ಲಿ ಸುದ್ದಿಯಾಗ್ಬೇಕಿತ್ತೋ ಅದು ಬಿಟ್ಟು ಬೇರೆ ಆಯಾಮದಲ್ಲೆಲ್ಲಾ ಚರ್ಚೆಯಾಗೋದಕ್ಕೆ ಶುರುವಾಗಿದೆ. ಸದ್ಯ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಸ್ಟಾರ್ಸ್ ಹಾವಳಿಯಿಂದ ಬೇಸತ್ತು ಈಗ ಆಕೆ ಮನೆ ಸೇರುವಂತಾಗಿದೆ.

ಇದರ ಬಗ್ಗೆ ಈಗ ನಟ ಒಳ್ಳೆ ಹುಡ್ಗ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವಾಗಿ ಬರೆದುಕೊಂಡಿರುವ ಅವರು, ‘ಸಾಧು ಸಂತರನ್ನ ತೋರಿಸಿ ಅಂದ್ರೆ ಸರ ಮಾರೋಳನ್ನ super model ಅಂತ 24 ಗಂಟೆ ತೋರಿಸ್ತಾ ಇದ್ದಾರಲ್ಲಾ, ನಮ್ ದೇಶ ಹೆಂಗಪ್ಪ ಉದ್ಧಾರ ಆಗುತ್ತೆ? ಎಂದಿದ್ದಾರೆ. ಕೋಟಿ ಜನ ಸೇರೋ ಕುಂಭಮೇಳದ ವಿಡಿಯೋ ತೋರಿಸಿ ಅಂದ್ರೆ, ಅದ್ಯಾರೋ ಮೊನಾಲಿಸಾ ಹಿಂದೆ ಬಿದ್ದು, ಆಕೆ ಕ್ಯಾಮೆರಾ ಕಿತ್ತು ಬಿಸಾಕೋವರೆಗೂ ಅವಳಲ್ಲ ಬಿಡಲಿಲ್ಲ ನಮ್ ಜನ. ಮೊಘಲರ ನಡುಗಿಸಿದ ನಾಗ ಸಾಧುಗಳನ್ನು ತೋರಿಸಿ ಅಂದ್ರೆ, ಸರ ಮಾರೋಳನ್ನು ಮಾಡೆಲ್ ಅಂತ ತೋರಿಸ್ತಿದ್ದಾರೆ ಈ ಮೀಡಿಯಾ. ಇನ್ನು ಈ ದೇಶ ಉದ್ಧಾರ ಆಗು ಅಂದ್ರೆ ಹೆಂಗಪ್ಪಾ ಅಂತ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ಸರ್ಕಾರದ ಮತ್ತು ಸಮಾಜದ ಪ್ರಮುಖ ಅಂಗಗಳು ಯಾರ ಕೈಯಲ್ಲಿ ಇರಬೇಕೋ ಅವರ ಕೈಯಲ್ಲೇ ಇರಬೇಕು.. ಆಗ ಮಾತ್ರ ಎಲ್ಲದಕ್ಕೂ ಅರ್ಥ ಮತ್ತು ಎಲ್ಲವೂ ಸಮರ್ಥ ಇಲ್ಲವಾದ್ರೆ ಹೀಗೆ ದುರರ್ಥ