ದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಟೀಂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು(ಜ.24) ವಿಚಾರಣೆ ನಡೆಯಲಿದೆ.
ಪ್ರಕರಣದ ೧೭ ಮಂದಿ ಕೂಡಾ ಜಾಮೀನು ಪಡೆದಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ೭ ಮಂದಿಯ ಜಾಮೀನು ರದ್ದುಪಡಿಸುವಂತೆ ಪೊಲೀಸರು ಸುಪ್ರೀಂ ಮೊರೆ ಹೋಗಿದ್ದಾರೆ. ಈ ಸಂಬಂಧ ೧೪೯೨ ಪುಟಗಳ ಅಗತ್ಯ ದಾಖಲೆಗಳ ಕಡತವನ್ನು ಸಲ್ಲಿಕೆ ಮಾಡಿದ್ದಾರೆ. ವಕೀಲ ಅನಿಲ್ ನಿಶಾನಿ ಮೂಲಕ ಮೇಲ್ಮನವಿ ಸಲ್ಲಿಸಿರುವ ಪೊಲೀಸರು ಜಾಮೀನು ಯಾಕಾಗಿ ರದ್ದುಪಡಿಸಬೇಕೆಂಬ ಬಗ್ಗೆ ಅಗತ್ಯ ಅಂಶಗಳನ್ನ ಉಲ್ಲೇಖಿಸಿದ್ದಾರೆ.
ಇಂದು ಸುಪ್ರೀಂನಲ್ಲಿ ವಿಚಾರಣೆ ಇರುವುದರಿಂದ ಡಿ ಗ್ಯಾಂಗ್ಗೆ ಆತಂಕ ಶುರುವಾಗಿದೆ. ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿರುವ ಆರೋಪಿಗಳ ಜಾಮೀನು ಭವಿಷ್ಯ ಏನಾಗುತ್ತೆ? ಜಾಮೀನು ರದ್ದಾಗುತ್ತಾ ಅಥವಾ ಸುಪ್ರೀನಲ್ಲೂ ರಿಲೀಫ್ ಸಿಗುತ್ತಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

