ಚಿಕ್ಕಮಗಳೂರು : ವ್ಯಕ್ತಿಯೊಬ್ಬರು ಊರಿನ ಸ್ಮಶಾನ ಜಾಗವನ್ನೇ ಕಬಳಿಸಿಕೊಂಡಿದ್ದು, ಗ್ರಾಮದ ಜನ ಮೃತರ ಅಂತ್ಯಕ್ರಿಯೆ ನೆರವೇರಿಸೋದಕ್ಕೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಇದು ಚಿಕ್ಕಮಗಳೂರಿನ ಮುಳ್ಳುಂಡೆ ಗ್ರಾಮದ, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಸ್ಟೋರಿ. ಗ್ರಾಮದ ನಿವಾಸಿ ೮೦ ವರ್ಷದ ತಿಮ್ಮಮ್ಮ ಎಂಬವರು ಮೃತರಾಗಿದ್ದಾರೆ. ಆದರೆ ಅವರ ಅಂತ್ಯಕ್ರಿಯೆ ಮಾಡೋದಕ್ಕೆ ಸೂಕ್ತ ಜಾಗ ಸಿಗದೆ ಕುಟುಂಬಸ್ಥರು ಪರದಾಡಿದ್ದಾರೆ. ಊರಲ್ಲಿ ಯಾರೇ ಸತ್ತರೂ ಊರಿನ ಸ್ಮಶಾನ ಜಾಗವೆಂದು ಗುರುತಿಸಿದ್ದ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಅನೇಕ ಮಂದಿಯ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಇತ್ತೀಚೆಗೆ ಆ ಜಾಗವನ್ನು ಗೋಪಾಲಗೌಡ ಎಂಬವರು ಕಳಸಿಕೊಂಡಿರುವ ಆರೋಪ ಕೇಳಿಬಂದಿದೆ. ತಿಮ್ಮಮ್ಮ ಅವರ ಅಂತ್ಯಕ್ರಿಯೆಗೆ ಮುಂದಾದಾಗ ಗೋಪಾಲಗೌಡ, ಮಗ ರಕ್ಷಿತ್ ಅಡ್ಡಿಪಡಿಸಿದ್ದಾರೆ. ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಊರಿನ ಸ್ಮಶಾನಕ್ಕಾಗಿ ಜನ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ. ಹೆಣ ಸುಡೋದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆಂಬ ಆರೋಪವೂ ಇದೆ. ಅಧಿಕಾರಿ ವರ್ಗ ಗಾಢ ಮೌನದಿಂದ ಎಚ್ಚೆತ್ತು ಬಡಜನರ ಸಮಸ್ಯೆಗೆ ಸ್ಪಂದಿಸಿ, ಸ್ಮಶಾನದ ಬಳಕೆಗೆ ಅನುವು ಮಾಡಿಕೊಡಬೇಕಿದೆ.
ಸ್ಮಶಾನ ಜಾಗವನ್ನೂ ಬಿಡದ ವ್ಯಕ್ತಿ – ಹೆಣ ಸುಡೋದಕ್ಕೂ ಬಿಡದೆ ದರ್ಪ ಮೆರೆದ ಅಪ್ಪ, ಮಗ..!
RELATED ARTICLES