ಹಾಸನ : ನಗರದ ಜಯನಗರದ ಚಿಕ್ಕಹೊನ್ನೆನಹಳ್ಳಿ ಬಳಿ ಇರುವ ಜೈಮಾರುತಿ ನಗರದಲ್ಲಿ ಸ್ಥಳೀಯ ಜನರ ಸಹಕಾರದಲ್ಲಿ ಹಸಿರುಭೂಮಿ ಪ್ರತಿಷ್ಠಾನ ನೆಟ್ಟಿದ್ದ ಮಿಯಾವಾಕಿ ಗಿಡಗಳನ್ನು ಧ್ವಂಸ ಮಾಡಿದ್ದನ್ನು ಖಂಡಿಸಿ ಪ್ರತಿಷ್ಠಾನ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಗಿರಿಜಾಂಬಿಕ, ಸದಸ್ಯರಾದ ಪುರುಷೋತ್ತಮ್, ಅಪ್ಪಾಜಿಗೌಡ, ಶಿವಶಂಕರಪ್ಪ, ಮಮತಪಾಟೀಲ್, ದಿನೇಶ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಗಿಡ ಹಾಕುವ ಮೊದಲು ಸ್ಥಳೀಯ ನಿವಾಸಿಗಳ ಜೊತೆ ಚರ್ಚಿಸಲಾಗಿತ್ತು. ಗಿಡ ಬೆಳೆದ ಸಮಯದಲ್ಲಿ ಏಕಾಏಕಿ ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ. ೧೧೦ ಅಮೂಲ್ಯ ಗಿಡಗಳನ್ನು ನೆಲಸಮ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳೀಯ ನಿವಾಸಿಗಳಿಂದಲೇ ಈ ಕೃತ್ಯ ಆಗಿದೆ. ಪರಿಸರದ ಬಗ್ಗೆ ಕಾಳಜಿ ಇಲ್ಲದವರಂತೆ ವರ್ತಿಸಿದ್ದಾರೆ. ಗಿಡಗಳನ್ನು ಜೆಸಿಬಿಯಲ್ಲಿ ನೆಲಸಮ ಮಾಡಿರುವುದು ಮೊಬೈಲ್ ನಲ್ಲಿ ರೆಕಾರ್ಡ್ ಕೂಡ ಆಗಿದೆ. ಗಿಡ ನೆಡುವ ಮೊದಲು ಸಲಹೆ ನೀಡಿದ್ದರೆ ಅವರ ಸಲಹೆಯಂತೆ ಮಾಡುತ್ತಿದ್ದೆವು ಎಂದು ಪ್ರಮುಖರು ಹೇಳಿದರು. ಇದೇ ವೇಳೆ ಗಿಡ ತೆರವು ಮಾಡಿದವರು ಮತ್ತು ಪ್ರತಿಭಟನಾ ನಿರತರ ನಡುವೆ ವಾಗ್ವಾದವೂ ನಡೆಯಿತು.
ಹಾಸನ : ಜೈಮಾರುತಿ ನಗರದಲ್ಲಿ ಗಿಡಗಳ ತೆರವಿಗೆ ಖಂಡನೆ – ಹಸಿರುಭೂಮಿ ಪ್ರತಿಷ್ಠಾನದಿಂದ ಪ್ರತಿಭಟನೆ..!
RELATED ARTICLES