ತಿರುವನಂತಪುರಂ : ಭಾರತ ಹಾಕಿ ತಂಡದ ಮಾಜಿ ಆಟಗಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಕುಟುಂಬ ಸದಸ್ಯರಿಗೆ ಕೇಂದ್ರ ಸಚಿವ ಸುರೇಶ್ ಗೋಪಿ ಔತಣಕೂಟ ಏರ್ಪಡಿಸಿದ್ದರು.
ಇಲ್ಲಿನ ತಮ್ಮ ನಿವಾಸಕ್ಕೆ ಶ್ರೀಜೇಶ್ ಕುಟುಂಬವನ್ನು ಬರಮಾಡಿಕೊಂಡ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಅವರೊಂದಿಗೆ ಕೆಲಕಾಲ ಕಳೆದರು. ಈ ವೇಳೆ ಕಂಚಿನ ಪದಕವನ್ನು ಹಿಡಿದು ಖುಷಿಪಟ್ಟರು. ಹಾಕಿಯಲ್ಲಿನ ಅವರ ಸಾಧನೆ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀಜೇಶ್ ಪತ್ನಿ ಅನೇಶ್ಯಾ, ಮಕ್ಕಳು, ಪೋಷಕರು ಈ ಸಂದರ್ಭ ಉಪಸ್ಥಿತರಿದ್ದರು. ಸುರೇಶ್ ಗೋಪಿ ಮತ್ತು ಅವರ ಪತ್ನಿ ರಾಧಿಕಾ ಸುರೇಶ್ ಗೋಪಿ ಕೇರಳದ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ ಶ್ರೀಜೇಶ್, ವೃತ್ತಿಪರ ಹಾಕಿಯಿಂದ ನಿವೃತ್ತರಾಗಿದ್ದರು. ನಿವೃತ್ತಿಯ ನಂತರದ ಸಮಯವನ್ನು ಕುಟುಂಬದ ಜತೆಗೆ ಕಳೆಯುವುದಾಗಿ ಅವರು ಹೇಳಿಕೊಂಡಿದ್ದರು.
ಸುರೇಶ್ ಗೋಪಿ ಮನೆಯಲ್ಲಿ ಹಾಕಿ ಗೋಡೆ ಶ್ರೀಜೇಶ್ ಕುಟುಂಬಕ್ಕೆ ಔತಣ..!
RELATED ARTICLES