Monday, August 4, 2025
!-- afp header code starts here -->
Homebig breakingBig Boss Kannada 11 - ಗ್ರ್ಯಾಂಡ್‌ ಫಿನಾಲೆ ಆರಂಭ - ಮೊದಲ ಸ್ಪರ್ಧಿಯಾಗಿ ಹೊರಬಂದ...

Big Boss Kannada 11 – ಗ್ರ್ಯಾಂಡ್‌ ಫಿನಾಲೆ ಆರಂಭ – ಮೊದಲ ಸ್ಪರ್ಧಿಯಾಗಿ ಹೊರಬಂದ ರಜತ್‌ ಕಿಶನ್..!‌

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ -11 ಕೊನೆಯ ಹಂತಕ್ಕೆ ಬಂದಿದೆ. ಇಂದು ಮತ್ತು ನಾಳೆ ಫಿನಾಲೆ ನಡೆಯಲಿದೆ. 6 ಮಂದಿ ಸ್ಪರ್ಧಿಗಳು ಪಿನಾಲೆ ರೇಸ್‌ನಲ್ಲಿದ್ದು, ಮೊದಲನೇ ದಿನ ಮೂವರು ಸ್ಪರ್ಧಿಗಳು ಮನೆಯಿಂದ ಹೊರಬರುವ ಸಾಧ್ಯತೆ ಇದೆ. ಆ ಮೂವರು ಯಾರು. ಅಂತಿಮ ದಿನಕ್ಕೆ ಅರ್ಹತೆ ಪಡೆಯುವವರ್ಯಾರು ಎಂಬ ಕುತೂಹಲ ಎದ್ದಿದೆ. ಇಂದಿನ ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್‌ ಕಿಶನ್‌ ಅವರು ಔಟ್‌ ಆಗಿ ಹೊರ ಬಂದಿದ್ದಾರೆಂದು ಸುದ್ದಿ ಹರಿದಾಡುತ್ತಿದೆ.

ಬಿಗ್ಬಾಸ್‌ ಆರಂಭವಾಗಿ ೫೦ ದಿನ ಬಳಿಕ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದು ಮನೆಗೆ ಕಾಲಿಟ್ಟ ರಜತ್‌ ಆಟ ಎಲ್ಲರನ್ನು ಆಶ್ಚರ್ಯಗೊಳಿಸಿತ್ತು. ಮನೆಯವರಿಗೆ ಸಖತ್ ಪೈಪೋಟಿ ನೀಡಿದ್ದರು ಕೂಡಾ. ಬಿಗ್‌ಬಾಸ್‌ ಕನ್ನಡದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವ ಸ್ಪರ್ಧಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಟದ ಕೊನೆಯ ಹಂತದವರೆಗೆ ಬಂದಿರುವ ಉದಾಹರಣೆ ಇಲ್ಲ. ಇದೀಗ ಫಿನಾರೆ ರೇಸ್‌ನಿಂದ ಹೊರಬಂದಿದ್ದಾರೆ.
ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ , ಭವ್ಯಾ, ಮಂಜು 50 ಗೆಲ್ಲುವ ಸ್ಪರ್ಧಿಗಳ ರೇಸ್‌ನಲ್ಲಿ ಉಳಿಯಲಿದ್ದಾರೆ. ಈ ನಡುವೆ ಬಿಗ್‌ಬಾಸ್‌ ನೋಡುತ್ತಿರುವ ಮಂದಿ ತಮ್ಮದೇ ಆದ ಲೆಕ್ಕಾಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!