ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಬಿದ್ದಿದೆ. ಬಿಗ್ ಬಾಸ್ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ನಿಯಮ ಮೀರಿ ಜಾಲಿವುಡ್ ಸ್ಟುಡಿಯೋಸ್ ನಡೆಸುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಪಾಲನೆ ಆಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್ಗೆ ಭೇಟಿ ನೀಡಿದರು.
ರಾಮನಗರ ತಹಶೀಲ್ದಾರ್ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್ ಒಳಗೆ ಪರಿಶೀಲನೆ ನಡೆಸಿದರು.
ನೋಟಿಸ್ ತೆಗೆದುಕೊಳ್ಳಲು ಜಾಲಿವುಡ್ ಆಡಳಿತ ಮಂಡಳಿ ನಕಾರ ಮಾಡಿತು. ಆಗ ಜಾಲಿವುಡ್ ಸ್ಟುಡಿಯೋಸ್ ಸಿಬ್ಬಂದಿಯನ್ನು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ಸ್ವೀಕರಿಸೋದಕ್ಕೆ ಬರಲು ಅರ್ಧ ಗಂಟೆ ಬೇಕಾ ಎಂದು ಗರಂ ಆದರು.
ಸೀಲ್ಡೌನ್ ಆದಮೇಲೆ ಒಳಗೆ ಯಾವುದೇ ಆಕ್ಟಿವಿಟಿ ನಡೆಯುವಂತಿಲ್ಲ. ಯಾವುದೇ ವ್ಯಕ್ತಿಗಳೂ ಇರುವಂತಿಲ್ಲ. ಹಾಗಾಗಿ, ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನ ಆಚೆ ಕಳುಹಿಸುವ ಸಾಧ್ಯತೆ ಇದೆ.
