TRPಯಲ್ಲಿ ದಾಖಲೆ ಮಾಡಿದ್ದ ಧಾರಾವಾಹಿಗಳಲ್ಲಿ ‘ಪಾರು’ ಕೂಡ ಒಂದು. ‘ಪಾರು’ ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ಮೋಕ್ಷಿತಾ ಪೈ ನಟಿಸಿದ್ದಾರೆ. ‘ಪಾರು’ ಧಾರಾವಾಹಿ ನಂತರದಲ್ಲಿ ಮೋಕ್ಷಿತಾ ಪೈ ಒಂದಾದ ಮೇಲೆ ಒಂದು ಟ್ರಿಪ್ ಮಾಡುತ್ತಿದ್ದಾರೆ. ದುಬೈ, ಊಟಿ, ಶಿರಡಿ ಟ್ರಿಪ್ ಮಾಡಿದ್ದು, ಈಗ ಬಾಲಿಯಲ್ಲಿ ಅವರು ಸ್ನೇಹಿತರ ಜೊತೆಗೆ ಪ್ರವಾಸ ಮುಗಿಸಿದ್ದಾರೆ. ಬಾಲಿಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮತ್ತೆ ಯಾವುದೇ ಟ್ರಿಪ್‌ನಲ್ಲಿ ತೊಡಗಿಸಿಕೊಳ್ಳದ ಮೋಕ್ಷಿತ ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದು ಎನ್ನಲಾಗ್ತಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಶುರುವಾಗುತ್ತಿದ್ದು, ಸೆಪ್ಟೆಂಬರ್ 29ರಿಂದ ಈ ಶೋ ಶುರುವಾಗಲಿದೆ. ಈ ಶೋನಲ್ಲಿ ಮೋಕ್ಷಿತಾ ಪೈ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.





