ಚಿಕ್ಕಮಗಳೂರು : ನಾಗರಿಕ ವ್ಯವಸ್ಥೆಗೆ ಶರಣಾದ ೬ ಮಂದಿ ನಕ್ಸಲರು ಹಾಗೂ ಶರಣಾಗತಿ ಬೆಳವಣಿಗೆಯನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ.
ಈ ವಿಚಾರವಾಗಿ NIA ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೂಲಕ ಮನವಿಯನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸಲ್ಲಿಸಿದೆ. ಡಿಸಿ ಕಚೇರಿಯಲ್ಲಿ ಭೇಟಿಯಾಗಿ ಮನಸಿ ಸಲ್ಲಿಸಿದ ಯುವ ಮೋರ್ಚಾ ನಿಯೋಗ, ತಮ್ಮ ಪತ್ರದಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ. ನಕ್ಸಲರು ಸರೆಂಡರ್ ವೇಳೆ ಶಸ್ತ್ರಾಸ್ತ್ರಗಳನ್ನ ಯಾಕೆ ನೀಡಿಲ್ಲ.? ಕಾಡಿನಲ್ಲಿದ್ದ ನಕ್ಸಲರಿಗೆ ಶಸ್ರ್ತಾಸ್ತ್ರಗಳನ್ನ ಯಾರು ಪೂರೈಕೆ ಮಾಡ್ತಿದ್ರು.?. ಸಂಧಾನಕಾರರಿಗೆ ನಕ್ಸಲರ ಬಗ್ಗೆ ಮೊದಲೇ ಸಂಪರ್ಕವಿತ್ತು ಅಲ್ವಾ.?. ಈ ಹಿಂದೆ ನಕ್ಸಲರ ಬಗ್ಗೆ ಮಾಹಿತಿ ನೀಡಿ ಅಂತಾ ಜಿಲ್ಲಾಡಳಿತ ಕೇಳಿತ್ತು. ಲಕ್ಷ ಲಕ್ಷ ಬಹುಮಾನ ಕೊಡ್ತೀವಿ ಅಂದ್ರೂ ಮಾಹಿತಿ ನೀಡಿರಲಿಲ್ಲ. ಇದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಅಂತ ಉಲ್ಲೇಖಿಸಿದೆ.
ಅನೇಕ ಮಂದಿ ಸಾರ್ವಜನಿಕರು, ಪೊಲೀಸರನ್ನ ನಕ್ಸಲರು ಕೊಂದಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಬರ್ಬರ ಕೃತ್ಯಗಳನ್ನ ನಕ್ಸಲರು ನಡೆಸಿದ್ದಾರೆ. ಇಂಥವರಿಗೆ ಕ್ಷಮಾದಾನ ನೀಡೋದು.? ಪ್ಯಾಕೇಜ್ ನೀಡೋದು ಎಷ್ಟು ಸರಿ.? ಹೀಗೆ ಸರಣಿ ಪ್ರಶ್ನೆಗಳನ್ನ ಮುಂದಿಟ್ಟು ಮನವಿ ಪತ್ರವನ್ನು ಸಲ್ಲಿಸಿದೆ.
yes , bjp asking the truth behind this.
all must wants to know