Advertisement

Homebig breakingBJP worker's post about Hindu Fire BRAND Shakuntala Nataraj goes viral /ಹಿಂದೂ...

BJP worker’s post about Hindu Fire BRAND Shakuntala Nataraj goes viral /ಹಿಂದೂ ಫೈರ್ BRAND ಶಕುಂತಲಾ ನಟರಾಜ್ ಕುರಿತು ಬಿಜೆಪಿ ಕಾರ್ಯಕರ್ತನ ಪೋಸ್ಟ್ ವೈರಲ್

ಪಬ್ಲಿಕ್ ಇಂಪ್ಯಾಕ್ಟ್ ಡೆಸ್ಕ್: ಸ್ವಂತ ಜೀವನ.. ಕೌಟುಂಬಿಕ ಜೀವನ.. ಸುಖ-ಸಂತೋಷ ಎಲ್ಲವನ್ನೂ ಬಿಟ್ಟು, ಯಾವುದೇ ಫಲಾಪೇಕ್ಷೆ ಇಲ್ಲದೇ ಮೂರು ಹೊತ್ತು ಪಕ್ಷ ಪಕ್ಷ ಅಂತಾ ಬಹುತೇಕ ಕಾರ್ಯಕರ್ತರು ತಮ್ಮ ಜೀವನವನ್ನೇ ಸಮರ್ಪಣೆ ಮಾಡೋದನ್ನ ಇಂದಿನ ದಿನಗಳಲ್ಲಿ ನಾವೆಲ್ಲಾ ನೋಡುತ್ತಲೇ ಇರ್ತಿವಿ. ಒಂದು ಪರ್ಸೆಂಟ್ ಕಾರ್ಯಕರ್ತಅಂತಾ ತೋರಿಸಿಕೊಂಡು, 99 ಪರ್ಸೆಂಟ್ ಲಾಭ ಮಾಡಿಕೊಳ್ಳುವ ಕೆಲ ಕಾರ್ಯಕರ್ತರು ಮಾತ್ರ ಇದಕ್ಕೆ ತದ್ವಿರುದ್ಧ ಇರಬಹುದು. ಅಂತಹ ಸಮರ್ಪಣಾ ಭಾವದ ಕಾರ್ಯಕರ್ತರು ಇರೋದ್ರಿಂದಲೇ ಶಾಸಕ, ಮಂತ್ರಿ, ಸಿಎಂ ಸೇರಿದಂತೆ ಪಕ್ಷದ ಅಧ್ಯಕ್ಷ, ಹೈಕಮಾಂಡ್.. ಅದು ಇದು ಎಲ್ಲವೂ ನಿಮಗೆ ಒಲಿದು ಬಂದಿರೋದು.! ಹಾಗಂತ ಇದು ಯಾವುದೋ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಎಲ್ಲಾ ಪಕ್ಷದಲ್ಲೂ ನಿಷ್ಠಾವಂತ ಕಾರ್ಯಕರ್ತರ ಹಣೆಬರಹ ಕೂಡ ಇದೇ. ಬಕೆಟ್ ಹಿಡಿಯುವರು, ಜೀ ಹೂಜುರ್ ಅನ್ನೋರಿಗೆ ಮಾತ್ರ ಪಕ್ಷದ ಮುಖಂಡರು ಮಣೆ ಹಾಕ್ತಾ ಇರೋದು ನಿಜಕ್ಕೂ ದುರಂತ.! ಇದು ಮುಂದಿನ ದಿನಗಳಲ್ಲಿ ನಿಮ್ಮನ್ನ ಬಲಿ ತೆಗೆದುಕೊಳ್ಳೋದ್ರಲ್ಲಿ ನೋ ಡೌಟ್.! ಹಿಂದೂ ಫೈರ್ BRAND ಖ್ಯಾತಿಯ ಶಕುಂತಲಾ ನಟರಾಜ್ ಅವರ ಪರಿಸ್ಥಿತಿಯನ್ನ ಕೇಳಿದ್ರೆ ನಿಜಕ್ಕೂ ಇಂಥಹ ಹಾಳು ರಾಜಕೀಯ ಬೇಕಾ..? .. ಅಸಹ್ಯ ಪಾಲಿಟಿಕ್ಸ್ ಅನ್ಸುತ್ತೆ.! ಅದೇನೆ ಇರಲಿ ಒಳ್ಳೆಯದನ್ನ ಮಾಡೋರಿಗೆ ಖಂಡಿತಾ ಒಳ್ಳೆಯದ್ದೇ ಆಗುತ್ತೆ .. ಆದ್ರೆ ಕಾಯುವ ತಾಳ್ಮೆಯಿರಬೇಕು ಅಷ್ಟೇ. ಸದ್ಯ ಶಕುಂತಲಾ ನಟರಾಜ್ ಕುರಿತು ಬಿಜೆಪಿ ಕಾರ್ಯಕರ್ತರೊಬ್ಬರು ಬರೆದಿರೋ ಬರಹ ಎಲ್ಲೆಡೆ ವೈರಲ್ ಆಗ್ತಿದೆ. ಅಷ್ಟಕ್ಕೂ ಏನಿದೆ ಅದರಲ್ಲಿ ಅಂತೀರಾ..? ಕೆಳಗಿದೆ ಆ ಬರಹ..ನೋಡಿ..

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಬಿಜೆಪಿ ಕಾರ್ಯಕರ್ತನ ಪೋಸ್ಟ್

ರಾಜ್ಯದಲ್ಲಿ ಬಿಜೆಪಿ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರ ಸ್ಥಿತಿ ಚಿಂತಾಜನಕವಾಗಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ, ಹಿಂದೆ ನಡೆದ ಹಲವಾರು ಘಟನೆಗಳು,ಹತ್ತಾರು ಕಾರ್ಯಕರ್ತರ ಸಾವು-ನೋವು ನೋಡಿದಾಗ ನಮಗೆ ಅರ್ಥವಾಗದೇ ಇರುವುದಿಲ್ಲ.ಸತ್ತವರ ಮನೆಯವರ ಸ್ಥಿತಿ-ಗತಿಯನ್ನು ಕೇಳುವವರು ಇರುವುದಿಲ್ಲ.ಇದಕ್ಕೆ ತಾಜಾ ಉದಾಹರಣೆ ವಿನಯ್ ಸೋಮಯ್ಯ ಅವರ ಸಾವು.

ಕಾರ್ಯಕರ್ತರ ಮೇಲೆ ಕೇಸುಗಳಾದರು ಸಹ ಬೇಲ್ ಕೊಡಿಸೋರು ದಿಕ್ಕಿರೋದಿಲ್ಲ.

ಅತ್ಯಂತ ನಿಷ್ಠಾವಂತ ಕಾರ್ಯಕರ್ತರು ಕೂಡ ಸಾಕಪ್ಪ ಪಕ್ಷದ ಸಹವಾಸ ಅನ್ನೋವಷ್ಟರ ಮಟ್ಟಿಗೆ ಸುಸ್ತಾಗಿ ಹೋಗಿದ್ದಾರೆ.ಅದರಲ್ಲಿ ನಾನು ಗಮನಿಸಿದಂತೆ ತುಮಕೂರಿನ ಹಿಂದೂ ಫ್ರೈರ್ ಬ್ರಾಂಡ್ ಖ್ಯಾತಿಯ ಶಕುಂತಲಾ ನಟರಾಜ್ ಅವರ ಕಥೆಯಂತೂ ಮನಕಲಕುವಂತದ್ದು.ಐದಾರು ವರ್ಷಗಳಿಂದ ನಾ ನೋಡಿದಂತೆ ನಿಜವಾಗಿಯೂ ಆಕೆ ಗಟ್ಟಿಗಿತ್ತಿ, ಪ್ರಾಮಾಣಿಕಳು,ಸ್ವಾಭಿಮಾನಿ,ಅಪ್ಪಟ ಮೋದಿ ಭಕ್ತೆ,ಬಹುಶಃ ಇಡೀ ರಾಜ್ಯದಲ್ಲೇ ಇಂತಹ ಕಟ್ಟರ್ ಹಿಂದೂ ಕಾರ್ಯಕರ್ತೆ ಹುಡುಕಿದರೂ ಸಿಗುವುದಿಲ್ಲ ಅನ್ನಿಸುತ್ತೆ.

ನಾ ಕೇಳ್ಪಟ್ಟಿರೋ ಪ್ರಕಾರ ಕ್ಲೀನ್ ಇಮೇಜ್ ಇರುವ ಈಕೆ ಹಿಂದುತ್ವದ ವಿಚಾರ ಬಿಟ್ಟು ಇನ್ಯಾವುದೇ ವಿಚಾರದ ಜೊತೆ ‘ನೋ ಕಾಂಪ್ರಮೈಸ್’.

ಆಕೆ ಚಿಕ್ಕ ವಯಸ್ಸಿನಲ್ಲೇ ತನ್ನ ಗಂಡನನ್ನು ಕಳೆದುಕೊಂಡ ವಿಧವೆ, ಮಧ್ಯಮ ವರ್ಗದ ಲಿಂಗಾಯತ ಸಮುದಾಯದ ಹೆಣ್ಣು ಮಗಳು.ಎರಡು ಮಕ್ಕಳನ್ನು ಬೆಳೆಸುತ್ತಾ ಜೊತೆ ಜೊತೆಯಲ್ಲಿ ಕೃಷಿ, ಹೈನುಗಾರಿಕೆ ಮಾಡುತ್ತಾ ಪಕ್ಷದ ಸೇವೆಯಲ್ಲಿ ನನ್ನನ್ನು ತಾನು ತೊಡಗಿಸಿಕೊಂಡಿರುವ ದಿಟ್ಟ ಹೆಣ್ಣು.ಯಾರಿಗೂ ಜಗ್ಗದೇ ನೇರವಾಗಿ ಕಾಂಗ್ರೆಸ್ ಸರ್ಕಾರವನ್ನ ಎದುರು ಹಾಕಿಕೊಂಡು ಅಬ್ಬರಿಸುತ್ತಿದ್ದ ಈಕೆಗೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಸುಖಾ ಸುಮ್ಮನೆ 5-6 ಕೇಸುಗಳನ್ನು ಹಾಕಿ ನಿರಂತರ ತೊಂದರೆ ಕೊಡುತ್ತಲೇ ಬಂದಿತ್ತು.ಜೊತೆಗೆ ಇತ್ತೀಚೆಗೆ ರೌಡಿ ಶೀಟರ್ ತೆರೆಯುವುದಾಗಿ ನೋಟೀಸ್ ಕೂಡ ನೀಡಿತ್ತು.ಜೊತೆಗೆ ಪಕ್ಷದಲ್ಲೂ ಈಕೆಯ ಜನಪ್ರಿಯತೆಯನ್ನು ಸಹಿಸದ ತುಮಕೂರಿನ ಸ್ಥಳೀಯ ಬಿಜೆಪಿ ನಾಯಕರು ಶಕುಂತಲಾ ವಿರುದ್ದ ಕತ್ತಿ ಮಸೆಯುತ್ತಲೇ ಇದ್ದರು. ಸಕ್ರೀಯವಾಗಿದ್ದ ಇವರಿಗೆ ಪಕ್ಷದ ಯಾವುದೇ ಜವಾಬ್ದಾರಿ ‌ನೀಡದೆ ಪಕ್ಷದಿಂದ ಹೊರಗಿಟ್ಟು, ಕೇಸುಗಳಾದ ಸಂದರ್ಭದಲ್ಲಿ ಕೂಡ ಸಹಾಯ ಮಾಡದೇ ಮಾನಸಿಕವಾಗಿ ಹಿಂಸಿಸುತ್ತಿದ್ದರು.ಎಷ್ಟರ ಮಟ್ಟಿಗೆ ಎಂದರೆ ತುಮಕೂರಿನ ಸ್ಥಳೀಯ ನಾಯಕರು ಈಕೆಯ ಪರ ನಿಂತು ಮಾತಾಡಿದ್ದು, ಸಪೋರ್ಟ್ ಮಾಡಿದ್ದು ನಾವು ಎಂದೂ ನೋಡೇ ಇಲ್ಲ.ಕನಿಷ್ಠ ಒಬ್ಬ ಹೆಣ್ಣು ಮಗಳು ಅನ್ನೋ ಕನಿಕರವಾದ್ರು ಇಲ್ಲವಾಗಿತ್ತು.

ಆದರೆ ಎಲ್ಲವನ್ನು ಗಟ್ಟಿಯಾಗಿ ಮೆಟ್ಟಿನಿಂತಿದ್ದ ಈಕೆ ಕೇಸುಗಳ ವಿಚಾರವಾಗಿ ಡೋಂಟ್ ಕೇರ್ ಎನ್ನುತ್ತಿದ್ದಳು.ಆದರೆ ಇಂತಹ ಕಾರ್ಯಕರ್ತರ ನೆರವಿಗೆ ಯಾರು ಬರುತ್ತಾರೆ ಹೇಳಿ?ಈಗಿರುವ ಬಿಜೆಪಿ ಬ್ಲೂ ಬಾಯ್ಸ್, ಚಪಲ ಚನ್ನಿಗರಾಯರ ನಡುವೆ ಈಕೆ ಸ್ಟ್ರಾಂಗ್ ಇರುವುದಕ್ಕಾಗಿ ಇನ್ನು ಯಾವುದೇ ಸಿಡಿ-ಗಿಡಿ ಬಂದಿಲ್ಲ ಅನ್ನಿಸುತ್ತೆ.

ಇವರ ಬಗ್ಗೆ ಯಾವುದೇ ಅನ್ಯರೀತಿಯ ಆರೋಪಗಳನ್ನು ಸಹ ಕೇಳ್ಪಟ್ಟಿಲ್ಲ ಕೂಡ.

ಇವರ ಪರ ಸಾಕಷ್ಟು ಸಲ ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಧನಿ ಎತ್ತಿದ್ದನ್ನ ನಾನು ಕಂಡಿದ್ದೇನೆ.ಆದರೆ ಅಲ್ಲೊಬ್ಬ ಇಲ್ಲೊಬ್ಬ ಬಿಜೆಪಿ ನಾಯಕರನ್ನು ಬಿಟ್ಟು ಬಾಕಿ ಯಾರೂ ಸಹ ಆಕೆಯ ನೆರವಿಗೆ ಗಟ್ಟಿಯಾಗಿ ನಿಂತಿದ್ದು ನಾವು ನೋಡೇ ಇಲ್ಲ.ದೌರ್ಭಾಗ್ಯ ಎಂಬಂತೆ ಜೀವನದಲ್ಲಿ ರಾಜಕಾರಣಿಗಳಲ್ಲದೆ ದೇವರೂ ಕೂಡ ಈಕೆಯ ವೈಯುಕ್ತಿಕ ಬದುಕಿನಲ್ಲಿ ಸಹ ಆಟವಾಡಿಬಿಟ್ಟ.ಕೆಲವು ತಿಂಗಳ ಹಿಂದೆ ಆಕೆಯ ಮಗ 13 ವರ್ಷದ ತ್ರಿಶಾಲ್ ನೇಣಿಗೆ ಶರಾಣಾಗಿಬಿಟ್ಟಿದ್ದ.

ತಾಯಿಗೆ ಮುಂದೆ ನೆರವಾಗಬೇಕಾಗಿದ್ದ ಮಗ ತ್ರಿಶಾಲ್ 7 ನೇ ತರಗತಿ ಓದುತ್ತಿದ್ದ, ನಾ ಸ್ಥಳೀಯರಲ್ಲಿ ವಿಚಾರಿಸಿದಂತೆ ತುಂಬಾ ಒಳ್ಳೆಯ ವಿದ್ಯಾರ್ಥಿ,ರಾಜ್ಯ ಮಟ್ಟದ ಖೋಖೋ ಆಟಗಾರ, ಧ್ಯೆರ್ಯವಂತ, ಅವರ ಶಿಕ್ಷಕರಿಗೆ ಅಚ್ಚು ಮೆಚ್ಚಿನ ಹುಡುಗ, ಸುಸಂಸ್ಕೃತವಂತ, ಆತನ ತಾಯಿ ತುಂಬಾ ಚನ್ನಾಗಿ ಬೆಳೆಸಿದ್ದರು.ಇದನ್ನು ಯಾರೋ ಹೇಳಿದ್ದರೆ ನಂಬುತ್ತಿರಲಿಲ್ಲ ಅದೇ ಕೇಸ್ ನಿಭಾಯಿಸುತ್ತಿರುವ ಕೆಲವು ಪೊಲೀಸರೇ ನನ್ನ ಸ್ನೇಹಿತರು, ಅವರೇ ಹೇಳಿದ ಮಾತು.

ಇದನ್ನು ಕೇಳಿ ಒಂದು ಕ್ಷಣ ನನಗೆ ಆಘಾತವಾಯಿತು,ಜವಾಬ್ದಾರಿ ಎತ್ತಿಹಿಡಿಯಬೇಕಾದ ಮಾಧ್ಯಮಗಳು ಸಹ ಸುಳ್ಳು ಸುದ್ದಿ ಬಿತ್ತರಿಸಿ ವಿಕೃತಿ ಮೆರೆದಿದ್ದವು.

ಪಾರಿವಾಳ ಬೆಟ್ಟಿಂಗ್ ಅಂತ ಸುದ್ದಿ ಮಾಡಿ ಆ ಪುಟ್ಟ ಪೋರನ ಸಾವಿನಲ್ಲಿಯೂ ವಿಕೃತ ತೃಷೆ ತೀರಿಸಿಕೊಂಡಿದ್ದವು.ಸಹಜವಾಗಿ ಯೋಚನೆ ಮಾಡಿದರೂ ಸಹ ಅಷ್ಟು ಪುಟ್ಟ ಕಂದ ಬೆಂಟಿಂಗ್ ಆಡಲು ಸಾಧ್ಯವೇ ಇಲ್ಲ.

ಪ್ರಾಣಿ ಪಕ್ಷಿಗಳೆಂದರೆ ತುಂಬಾ ಆಸೆ ಪಡುತ್ತಿದ್ದ ತ್ರಿಶಾಲ್ ಗೆ ಅದೇ ಮುಳುವಾಯಿತು.ನನಗೆ ಅನಿಸಿದ ಪ್ರಕಾರ ಮಗುವಿನ ಸಾವು ಒಂದು ಷಡ್ಯಂತ್ರದಂತೆ ಕಾಣುತ್ತಿದೆ.ಶಕುಂತಲಾ ಅವರನ್ನು ಮೂಲೆ ಗುಂಪು ಮಾಡಲು ಅವರ ಮಗನನ್ನು ಸಾಧನವಾಗಿ ಬಳಸಿಕೊಂಡರೇ?

ಕೆಲವೇ ತಿಂಗಳ ಹಿಂದೆ ಪರಿಚಯವಾಗಿದ್ದ,ಶಾಲೆಯ ಪಕ್ಕದಲ್ಲೆ ವಾಸವಾಗಿರುವ ಆದಿತ್ಯ ಎಂಬ 19 ವರ್ಷದ ಹುಡುಗ ಯಾರು? ಅವನು ಇಡೀ ಶಾಲೆಯಲ್ಲಿ ಎಲ್ಲರನ್ನು ಬಿಟ್ಟು ತ್ರಿಶಾಲ್ ನನ್ನೇ ಪರಿಚಯ ಮಾಡಿಕೊಂಡಿದ್ದಾದರು ಯಾಕೆ? ಒಂದು ತಿಂಗಳ ಹಿಂದಿನಿಂದ ಶಾಲೆಯಿಂದ ಬರುವ ದಾರಿಯಲ್ಲಿ ಚಿತ್ರಹಿಂಸೆ ಕೊಡುತ್ತಿದ್ದ ಈ ಗ್ಯಾಂಗ್ ಬಗ್ಗೆ ತನ್ನ ತಾಯಿ ಬಳಿ ಹೇಳದಿರಲು ಕಾರಣವೇನಿರಬಹುದು?

ಆ ಹುಡುಗನನ್ನು ಸಾವಿನವರೆಗೂ ಕರೆದುಕೊಂಡು ಹೋದ ವಿಚಾರ ಏನಿರಬಹುದು?ಆದಿತ್ಯ ಅಂಡ್ ಗ್ಯಾಂಗ್ ಇವನನ್ನು ಸಾಯಲು ಪ್ರೇರೇಪಿಸಿತ್ತೆ?

ಈ ಆದಿತ್ಯನ ಹಿಂದೆ ಯಾರೆಲ್ಲ ಇರಬಹುದು?ಆದಿತ್ಯ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಪುಡಿ ರೌಡಿಗಳ ಜೊತೆ ಗ್ಯಾಂಗ್ ಕಟ್ಟಿಕೊಂಡು ರೌಡಿಸಂಗೆ ಇಳಿದಿದ್ದ ಹುಡುಗ.ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಬೇರೆ ಏನೋ ಇದ್ದಂತೆ ಕಾಣುತ್ತದೆ.ಆದರೆ ಇದರ ಬಗ್ಗೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲ.

ಪಾಪ ಆಕೆಗೆ ಒಂದು ಕಡೆ ನಿರಂತರವಾಗಿ ಕಾಂಗ್ರೆಸ್ನವರು ಕೇಸ್ ಮೇಲೆ ಕೇಸ್ ಹಾಕಿ ತೊಂದರೆ ಕೊಡುತ್ತಿದ್ದರು ಇನ್ನೊಂದು ಕಡೆ ಸ್ವಪಕ್ಷದವರೇ ಒಳಗೊಳಗೆ ಗುಂಡಿತೋಡುತ್ತಿದ್ದರು.

ಇದಲ್ಲವನ್ನು ಗಮನಿಸಿದರೆ ತ್ರಿಶಾಲ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯದೇ ಇರದು.

ಇದರಲ್ಲಿ ಜಿಹಾದಿಗಳ ಕೈವಾಡವಿದೆಯೇ ಅಥವಾ ಸ್ವಪಕ್ಷದವರೇ ಇದ್ದಾರೆಯೇ ಒಂದು ತಿಳಿಯುತ್ತಿಲ್ಲ‌.ಕಾಲವೇ ಎಲ್ಲದಕ್ಕೂ ಉತ್ತರ ಕೊಡಬೇಕು.ಆಕೆ ಅಕ್ಷರಶಃ ಕುಗ್ಗಿಹೋದಂತೆ ಕಾಣುತ್ತಿದೆ.

ಎನೇ ಆಗಲಿ ಭಗವಂತ ಆ ತಾಯಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.

ಪಕ್ಷದ ಮಹಾನ್ ನಾಯಕರು ಆಕೆಯನ್ನು ಮರೆತೇಬಿಟ್ಟಿದ್ದಾರೆ.ಮೂಲೆ ಗುಂಪು ಮಾಡಿದ್ದಾರೆ.ಇದು ಶಕುಂತಲ ನಟರಾಜ್ ಒಬ್ಬರ ಕಥೆಯಲ್ಲ ಇದರ ಬೆನ್ನಟ್ಟಿ ಹೋದರೆ ಹೀಗೆ ಮಧ್ಯದಲ್ಲಿಯೇ ಕಳೆದುಹೋದ ಎಷ್ಟೋ ಕಾರ್ಯಕರ್ತರ ನೋವಿನ ಕಥೆಗಳು ತೆರೆದುಕೊಳ್ಳುತ್ತವೆ.

ಅದರೆ ಅದೇ ನಾಯಕರು ರಾಜ್ಯಬಾರ ಮಾಡುತ್ತಾ,ಅಧಿಕಾರ ಅನುಭವಿಸುತ್ತಾ ಕಾರ್ಯಕರ್ತರ ಸಾವಿನ ಮೇಲೆ ಮತ್ತೆ ಮತ್ತೆ ಗೆಲ್ಲುತ್ತಲೇ ಆರಿಸಿ ಬರುತ್ತಾರೆ.

ಇಂತಿ ನಿಮ್ಮ ಪ್ರೀತಿಯ

ಕಾರ್ಯಕರ್ತ. Karnataka BJP

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!