Friday, March 27, 2026
Homebig breakingಪ್ರಚೋದನಕಾರಿ ಭಾಷಣ ಮಾಡಿದ ಆರೋಪ - ಪ್ರಮೋದ್‌ ಮುತಾಲಿಕ್‌ ವಿರುದ್ಧ ಪ್ರಕರಣ ದಾಖಲು

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ – ಪ್ರಮೋದ್‌ ಮುತಾಲಿಕ್‌ ವಿರುದ್ಧ ಪ್ರಕರಣ ದಾಖಲು

ಹಾಸನ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ ಹಾಗೂ ಇತರರ ವಿರುದ್ಧ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.9 ರಂದು ಸಕಲೇಶಪುರದರಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮುತಾಲಿಕ್‌ ಭಾಷಣ ಮಾಡಿದ್ದರು. ಭಾಷಣದಲ್ಲಿ ಅವ್ರು ಏನು ಹೇಳಿದ್ರು ಅಂತ ಗಮನಿಸಿದ್ರೆ, ಹಿಂದೂಗಳು ಮುಸ್ಲಿಮರಿಗೆ ಕುರಿಮಾಂಸ ಎಂದು ಹೇಳಿ ಕೊಡಿ ಅವರು ಹಲಾಲ್ ಆಗಿಲ್ಲ ಎಂದು ತಿನ್ನುವುದಿಲ್ಲ. ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ. ಅದು ಕೂಡಾ ಸಗಣಿ ತಿಂದಂಗೆ, ಇದು ಸರಿನಾ ಅಂತ ಪ್ರಶ್ನಿಸಿದ್ರು.

2003 ರಲ್ಲಿ ಸಕಲೇಶಪುರದಲ್ಲಿ ಹಿಂದುಗಳ ಏರಿಯಾದಲ್ಲಿ ಮುಸ್ಲಿಂ ಸಮುದಾಯದವರು ಒಂದು ಗೋಮಾಂಸದ ಅಂಗಡಿಯನ್ನು ತೆರೆದಿದ್ದರು. ಆಗ ಹಿಂದೂಗಳು ಸುಮ್ಮನೆ ಇರಲಿಲ್ಲ. ಅದೇ ಅಂಗಡಿಯ ಎದುರು ಹಂದಿಮಾಂಸದ ಅಂಗಡಿಯನ್ನು ತೆರೆದರು. ಸಹನೆಗೆ ಒಂದು ಮಿತಿ ಬೇಡವಾ ಆಕಳ ರಕ್ತ, ನಮ್ಮ ರಕ್ತ. ಮುಂದಿನ ದಿನಗಳಲ್ಲಿ ನಾವು ಗೋಮಾತೆ ರಕ್ಷಣೆ ಮಾಡುತ್ತೇವೆ. ಬೆಳಿಗ್ಗೆ ತರಕಾರಿ ಅಂಗಡಿಗೆ ಹೋದಾಗ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಳ್ಳಬೇಕು. ದೇವಸ್ಥಾನಕ್ಕೆ ಹೋದಾಗ ಹಿಂದೂಗಳ ಹತ್ತಿರ ಹಣ್ಣು ಕಾಯಿ ಖರೀದಿಸಬೇಕು. ಆಗ ಗೋಮಾತೆ ರಕ್ಷಣೆ ಮಾಡಿದಂತೆ ಆಗುತ್ತದೆ. ಆದರೆ ನಾವು ಮುಸ್ಲಿಂರ ಬಳಿ ತೆಗೆದುಕೊಂಡು ನಮ್ಮ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ ಎಂದಿದ್ದರು.
ಸಕಲೇಶಪುರ ಕಾಫಿ ಎಸ್ಟೇಟ್‌ಗಳಲ್ಲಿರುವ ಬಾಂಗ್ಲಾ ದೇಶದವರನ್ನು ಹೊರಹಾಕಬೇಕು. ಇಲ್ಲದ್ದಿದ್ದಲಿ ಮುಂದಿನ ದಿನಗಳಲ್ಲಿ ಗಂಡಾಂತರ ತಪ್ಪಿದ್ದಲ್ಲ. ಕಾಫಿ ತೋಟಕ್ಕೆ ಜನರು ಬೇಕಾದಲ್ಲಿ ನಾನು ಉತ್ತರ ಕರ್ನಾಟಕದಿಂದ ಕಳುಹಿಸಿ ಕೊಡುತ್ತೇನೆ. ಇಲ್ಲವಾದಲ್ಲಿ ನಾವೇ ಬಂದು ಬಾಂಗ್ಲಾ ಮುಸ್ಲಿಂರನ್ನು ಹೊರ ಹಾಕುತ್ತೇವೆ. ಹಿಂದೂಗಳ ರಕ್ಷಣೆಗಾಗಿ ಬರ್ಜಿ, ಕತ್ತಿ, ತಲ್ವಾರ್, ಬಂದೂಕುಗಳನ್ನು ಮನೆಗಳಲ್ಲಿ ಕಾಣುವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆಕೊಟ್ಟಿದ್ದರು.
ಭಾಷಣದ ಅಂಶಗಳನ್ನು ಇಟ್ಟುಕೊಂಡು ಪೊಲೀಸ್‌ ಇಲಾಖೆ ದೂರು ದಾಖಲಿಸಿಕೊಂಡಿದೆ. ಬಿಎನ್‌ಎಸ್ ಕಾಯ್ದೆ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!