Monday, March 30, 2026
Homebig breakingಬಾಲಕನ ಮರ್ಮಾಂಗ ಎಳೆದ ಸಹಪಾಠಿಗಳು - ಮುಂದೇನಾಯ್ತು ಗೊತ್ತಾ..!? ದಯವಿಟ್ಟು ಯಾರೂ ಈ ಥರ ಮಾಡ್ಬೇಡಿ…

ಬಾಲಕನ ಮರ್ಮಾಂಗ ಎಳೆದ ಸಹಪಾಠಿಗಳು – ಮುಂದೇನಾಯ್ತು ಗೊತ್ತಾ..!? ದಯವಿಟ್ಟು ಯಾರೂ ಈ ಥರ ಮಾಡ್ಬೇಡಿ…

ಸಂಪಾಜೆ(ಕೊಡಗು) : ಕೆಲವೊಮ್ಮೆ ನಾವು ಮಾಡುವ ತಮಾಷೆಯ ಆಟಗಳು ಜೀವಕ್ಕೇ ಸಂಚಕಾರ ತಂದೊಡ್ಡುತ್ತವೆ ಅಲ್ವಾ. ಇಂಥದ್ದೇ ಒಂದು ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಸಂಪಾಜೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ತಮಾಷೆ ಮಾಡಲು ಹೋಗಿ ಈಗ ಆತ ಆಸ್ಪತ್ರೆ ಸೇರುವಂತಾಗಿದೆ.


ಸಂಪಾಜೆಯ ಹಾಸ್ಟೆಲ್‌ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ 12 ವರ್ಷದ ಬಾಲಕನ ಮರ್ಮಾಂಗವನ್ನು ಆತನ ಸ್ನೇಹಿತರು ಹಿಡಿದೆಳೆದಿದ್ದಾರೆ. ಇದರಿಂದ ಆತನ ಮರ್ಮಾಂಗ ಊದಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಸೆಪ್ಟೆಂಬರ್‌ 14ರಂದು ಇಬ್ಬರು ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ನಂತರದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ನೋವಾಗುತ್ತಿದ್ದರೂ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನೋವು ತೀವ್ರವಾದ ಹಿನ್ನೆಲೆಯಲ್ಲಿ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಂಪಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!