ಧರ್ಮಸ್ಥಳ: ಗ್ರಾಮದಲ್ಲಿ ಹೂತಿಟ್ಟ ಶವಗಳ ಜಾಡು ಬೆನ್ನತ್ತಿರುವ ಎಸ್‌ಐಟಿಗೆ ಇಂದು ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿದೆ. 11ನೇ ಪಾಯಿಂಟ್‌ನ ಮೇಲ್ಭಾಗದ ಗುಡ್ಡದಲ್ಲಿ ಕಳೇಬರ ಪತ್ತೆಯಾಗಿದೆ. 5 ಅಡಿ ಆಳದಲ್ಲಿ ಅಸ್ಥಿಪಂಜರದ ಅವಶೇಷ ಸಿಕ್ಕಿದೆ.
ಅನಾಮಿಕ ದೂರುದಾರ ಗುರುತಿಸಿದ ಪಾಯಿಂಟ್ ನಂಬರ್ 11ರಲ್ಲಿ ಉತ್ಖನನಕ್ಕೆ ಎಸ್‌ಐಟಿ ಮುಂದಾಗಿದ್ದಾಗ ದೂರುದಾರ ಏಕಾಏಕಿ ಪಾಯಿಂಟ್ 11ರ ಸ್ಥಳ ಬದಲಾವಣೆ ಮಾಡಿಸಿದ್ದಾನೆ. ಈ ಜಾಗ ಅಲ್ಲ ಸ್ವಲ್ಪ ಮೇಲ್ಭಾಗಕ್ಕೆ ಬನ್ನಿ ಅಂತ ಗುಡ್ಡಕ್ಕೆ ಕರೆದೊಯ್ದು ಗುಂಡಿ ತೋಡಿಸಿದ್ದಾನೆ. ಈ ಗುಂಡಿಯಲ್ಲಿ ಅಸ್ಥಿಪಂಜರದ ಕುರುಹುಗಳು ಲಭ್ಯವಾಗಿರೋದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ
ವಿಶೇಷ ತನಿಖಾ ತಂಡ ಇಂದು ಪಾಯಿಂಟ್ 11 ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ಈ ಜಾಗವನ್ನು ಅಗೆಯದೇ ದೂರುದಾರ ಎಸ್‌ಐಟಿ ತಂಡವನ್ನು ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. 8, 9, 10, 11, 12 ಈ ಸ್ಥಳಗಳಲ್ಲಿ ಅತಿ ಹೆಚ್ಚು ಶವಗಳನ್ನು ಹೂತಿಟ್ಟ ಬಗ್ಗೆ ದೂರುದಾರ ದೂರು ನೀಡಿದ್ದ. ಈ ದೂರಿನಂತೆ ಪಾಯಿಂಟ್ ನಂಬರ್ 8, 9, 10 ರಲ್ಲಿ ಸ್ಥಳ ಅಗೆದು ಎಸ್‌ಐಟಿ ತಂಡ ಉತ್ಕನನ ನಡೆಸಿತ್ತು