ಬೆಂಗಳೂರು : ಸಿನಿಮಾ ಅಂದ್ರೇನೆ ಅದೊಂದು ಬಣ್ಣದ ಲೋಕ… ಈ ಲೋಕದಲ್ಲಿ ಮಿಂಚುತ್ತಿರುವ ಎಲ್ಲರ ಜೀವನವೂ ನಾವಂದುಕೊಂಡಂತೆ ಸುಂದರವಾಗಿರುವುದಿಲ್ಲ.. ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳು ಇರುತ್ತವೆ.. ಆದರೂ ಅವುಗಳನ್ನೆಲ್ಲ ಮರೆತು ಎಲ್ಲರನ್ನು ರಂಜಿಸಿ ದೊಡ್ಡ ಮಟ್ಟಕ್ಕೆ ಬೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ..ʼ ಅಂತಹ ನಟಿಯರ ಪಟ್ಟಿಯಲ್ಲಿ ಈ ಸೌತ್ ನಟಿಯೂ ಕೂಡ ಒಬ್ಬರು. ಇವರೊಂದಿಗೆ ಸಿನಿಮಾ ಮಾಡೋಕೆ ಅಂತಾನೇ ಅನೇಕ ನಿರ್ದೇಶಕರು ಡೇಟ್ ಸಲುವಾಗಿ ಕಾಯುತ್ತಿದ್ದಾರೆ. ಅವರೆ ಕೊಡಗಿನ ಬೆಡಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.
ಏಪ್ರಿಲ್ 5-1996 ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ಮಂದಣ್ಣಗೆ ಶಿಮಾನ್ ಮಂದಣ್ಣ ಎಂಬ ತಂಗಿ ಕೂಡ ಇದ್ದಾರೆ. ಇಬ್ಬರ ವಯಸ್ಸಿನಲ್ಲೂ 16 ವರ್ಷಗಳ ವ್ಯತ್ಯಾಸವಿದೆ. ರಶ್ಮಿಕಾ ಕನ್ನಡ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸದ್ಯ ರಶ್ಮಿಕಾ ಮುಂಬರುವ ಸಿನಿಮಾ ಬಗ್ಗೆ ಅಪ್‌ಡೇಟ್ ಒಂದು ಸಿಕ್ಕಿದೆ. ರಶ್ಮಿಕಾ ನಟಿಸಲಿರುವ ಹೊಸ ಸಿನಿಮಾಗಾಗಿ ಕರ್ನಾಟಕದ ಹಂಪಿಗೆ ಬರಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಲಿದ್ದಾರೆ. ಬಾಲಿವುಡ್‌ನ ‘ವ್ಯಾಂಪೈರ್ಸ್ ಆಫ್ ವಿಜಯನಗರ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದ
ಕಥೆ ಕರ್ನಾಟಕದಲ್ಲಿ ಶುರುವಾಗಲಿದೆ. ಅಕ್ಟೋಬರ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ಹಂಪಿಯಲ್ಲಿ ನಡೆಯಲಿದ್ದು, 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಯಾವ ಹೊಸ ಮೂವಿಯಲ್ಲಿ ನಟಿಸ್ತಿದ್ದಾರೆ ಗೊತ್ತಾ..?
RELATED ARTICLES