ಬೆಂಗಳೂರು: ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಮನವೊಲಿಸಿ ಮಲಗಿಸುವ ಬದಲು ಇಲ್ಲೊಬ್ಬ ತಂದೆ ತನ್ನ ಐದು ವರ್ಷದ ಮಗಳಿಗೆ ಸರಿಯಾಗ ಏನೂ ಅರಿಯದ ಬಾಲಕಿಗೆ ಚಿತ್ರಹಿಂಸೆ ಕೊಟ್ಟು ಸಿಗರೇಟ್ ನಿಂದ ಸುಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ
ಮಗುವಿನ ತಾಯಿ ಪೊಲೀಸರಿಗೆ ವಿಡಿಯೋವೊಂದನ್ನು ಕಳುಹಿಸಿದ್ದರು. ಅದರಲ್ಲಿ ಆಕೆಯ ಪತಿ ತಮ್ಮ ಮಗಳಿಗೆ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ಕೊಡುತ್ತಿರುವುದನ್ನು ಕಾಣಬಹುದು. ಈ ಆಘಾತಕಾರಿ ವಿಡಿಯೋ ನೋಡಿ ಬೆಚ್ಚಿಬಿದ್ದ ಪೊಲೀಸರು ದೂರು ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆಗಾಗಿ ಆರೋಪಿಯ ಮನೆಗೆ ಬಂದು ತಂದೆಯ ಬಳಿ ಮಾತನಾಡಿದ್ದಾರೆ. ಈ ವೇಳೆ ತನ್ನ ತಂದೆ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.