Friday, March 27, 2026
Homebig breakingನೀನೇ ಬೇಕು ಅಂತಾ ಪ್ರೀತಿಸಿ ಮದ್ವೆಯಾದ; 10 ಬಾರಿ ಚುಚ್ಚಿ ಬಾಳಿಗೆ ಬೆಂಕಿಯಿಟ್ಟ

ನೀನೇ ಬೇಕು ಅಂತಾ ಪ್ರೀತಿಸಿ ಮದ್ವೆಯಾದ; 10 ಬಾರಿ ಚುಚ್ಚಿ ಬಾಳಿಗೆ ಬೆಂಕಿಯಿಟ್ಟ

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಮನಸ್ಸೋ ಇಚ್ಛೆ 10 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‌ಪೊಸ್ಟ್‌ನಲ್ಲಿ ನಡೆದಿದೆ. ಕಟುಕನ ಕೈಗೆ ಸಿಲುಕಿ ಕೇವಲ 26 ವರ್ಷದ ಕೀರ್ತಿ ಎಂಬ ಹುಡುಗಿ ಉಸಿರನ್ನ ಚೆಲ್ಲಿದ್ದಾಳೆ. ತಮ್ಮ ದಾಂಪತ್ಯಕ್ಕೆ ಸಾಕ್ಷಿಯಾಗಿ 2 ವರ್ಷದ ಮಗುವಿದ್ರೂ ಕೂಡ ಪತ್ನಿಯನ್ನ ಬರ್ಬರವಾಗಿ ಕಡಿದು ಕೊಲೆ ಮಾಡಿರೋದು ಪಾಪಿ ಅವಿನಾಶ್.‌ ಅಂದಹಾಗೆ ಇಬ್ಬರು 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾದವರು. ಕೀರ್ತಿ ಮನೆಯವರಿಗೆ ಈ ಲವ್‌ ಮ್ಯಾರೇಜ್‌ ಇಷ್ಟವಿರಲಿಲ್ಲವಂತೆ. ಇಷ್ಟಾದ್ರೂ ನೀನೇ ಬೇಕು ಅಂತಾ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದವಳು ಇಂದು ಹೆಣವಾಗಿರುವ ಕೀರ್ತಿ. ಯೋಚನೆ ಮಾಡು, ಮದುವೆ ಅನ್ನೋದು ಸಾಮಾನ್ಯದ ವಿಚಾರವಲ್ಲ ಅಂತಾ ಎಷ್ಟೇ ಬುದ್ಧಿ ಹೇಳಿದ್ರೂ ಕ್ಯಾರೇ ಎನ್ನದೇ ಅವಿನಾಶ್‌ನನ್ನ ಸರ್ವಸ್ವ ಅಂದುಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ಳು ಆತುರುಗೇಡಿನ ಈ ಹುಡುಗಿ. ಆ ಬಳಿಕ ಗಂಡನ ಮನೆ ಹತ್ತಿರವೇ ಕೀರ್ತಿಯ ತವರು ಮನೆ ಇದ್ರೂ ಆಕೆಯನ್ನ ಮನೆಗೆ ಕಳುಹಿಸ್ತಾ ಇರಲಿಲ್ಲವಂತೆ ಈ ಪಾಪಿ ಅವಿನಾಶ್.‌

ಮೂರ್ನಾಲ್ಕು ಬಾರಿ ಅಬಾರ್ಷನ್‌ ಮಾಡಿಸಿದ್ನಂತೆ ನೀಚ

ಅವಿನಾಶ್-ಕೀರ್ತಿ ದಾಂಪತ್ಯಕ್ಕೆ ಸಾಕ್ಷಿಯಾಗಿ 2 ವರ್ಷದ ಆದ್ವಿಕಾ ಅನ್ನೋ ಮಗಳಿದ್ದಾಳೆ. ಮತ್ತೊಂದು ಮಗು ಬೇಕು ಅಂತಾ ಕೀರ್ತಿ ಆಸೆಪಟ್ಟಿದ್ದಳು. ಆದ್ರೆ ಗರ್ಭಿಣಿಯಾಗಿದ್ದ ಕೀರ್ತಿಯನ್ನ ಮೂರ್ನಾಲ್ಕು ಬಾರಿ‌ ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸಿದ್ದ ಅಂತಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ನೋವಾದ್ರೂ ಎಲ್ಲವನ್ನೂ ತಾನೇ ಒಡಲಲ್ಲಿ ಇಟ್ಟುಕೊಂಡು ಸಂಕಷ್ಟ ಅನುಭವಿಸ್ತಾ ಇದ್ಳು ಅಂತಾ ಕಣ್ಣೀರು ಹಾಕಿದ್ದಾಳೆ ಕೀರ್ತಿ ಸಂಬಂಧಿಕರು. ಮೊದಲೇ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗಿರೋದು, ಗಂಡನ ಕಿರುಕುಳ ಹೇಳಿಕೊಂಡ್ರೆ ಚೆನ್ನಾಗಿರಲ್ಲ ಅಂತಾ ಗಂಡನ ಕಿರುಕುಳವನ್ನ ಮನೆಯವರಿಗೆ ಹೇಳುವ ಗೋಜಿಗೆ ಹೋಗಿರಲಿಲ್ಲ ಕೀರ್ತಿ

ಡೈವರ್ಸ್‌ ಕೊಡು ಅಂತಿದ್ನಂತೆ ಪಾಪಿ ಪತಿ

ಮನೆಯಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೀತಾ ಇದ್ರೂ, ಅದನ್ನ ಕೂಡ ಯಾರಿಗೂ ಹೇಳದೇ ಪ್ರತಿನಿತ್ಯ ಸಂಕಟ ಅನುಭವಿಸ್ತಾ ಇದ್ದಳು ಈ ಕೀರ್ತಿ ಅನ್ನೋ ಪೆದ್ದು ಹುಡುಗಿ. ಇತ್ತೀಚಿಗೆ ನೀನು ಬ್ಯಾಡ, ನನಗೆ ಡೈವರ್ಸ್‌ ಕೊಡು ಅಂತಾ ಪೀಡಿಸುತ್ತಿದ್ದಾನಂತೆ ಈ ನೀಚ ಅವಿನಾಶ್.‌ ನಿನ್ನನ್ನ ಪ್ರೀತಿಸಿ ಮದುವೆಯಾಗಿದ್ದೀನಿ, ನನ್ನನ್ನ ದೂರ ಮಾಡ್ಬೇಡ, ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಮಗು ಕೂಡ ಇದೆ. ನಾನು ಡೈವರ್ಸ್‌ ಕೊಡಲ್ಲ ಅಂತಾ ಹಠ ಹಿಡಿದಿದ್ಳಂತೆ ಕೀರ್ತಿ. ಆದರೂ ಮಾತೆತ್ತಿದ್ರೆ ವಿಚ್ಛೇದನ ಬೇಕು ಅಂತಾ ಪೀಡಿಸುತ್ತಿದ್ದ ಅವಿನಾಶ್‌ ಕಳೆದ ಕೆಲ ದಿನಗಳಿಂದ ಹೆಂಡತಿ ಮೇಲೆ ಉರಿದು ಬೀಳುತ್ತಿದ್ದ. ನನ್ನ ತಮ್ಮನ ಮದುವೆಗೆ ಹೋಗ್ತೀನಿ ಅಂತಾ ಕೇಳಿದಾಗಲೂ ಡೈವರ್ಸ್‌ ಕೊಟ್ಟು ಹೋಗು ಅಂತಾ ಗಲಾಟೆ ಮಾಡಿದ್ನಂತೆ. ಇವತ್ತು ಮಧ್ಯಾಹ್ನ ಗಲಾಟೆ ಮಾಡಿ, ಹೆಂಡತಿಯನ್ನ ಚಾಕುವಿನಿಂದ ಹತ್ತು ಬಾರಿ ಇರಿದು ಚುಚ್ಚಿ ಚುಚ್ಚಿ ಸಾಯಿಸಿ, ಪರಾರಿಯಾಗಿದ್ದಾನೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಗಲಾಟೆ ಆಗೋದನ್ನ ಕೇಳಿ ಕೀರ್ತಿಯ ಮನೆಗೆ ಓಡೋಡಿ ಹೋಗಿದ್ದಾರೆ ಸಂಬಂಧಿಕರು. ಅಷ್ಟರಾಗಲೇ ಕೀರ್ತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇಷ್ಟಾದ ಮೇಲೂ ಬದುಕಿರಬಹುದು ಅನ್ನೋ ಆಸೆಯಿಂದ ಆಕೆಯನ್ನ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ. ಆದ್ರೆ ಕೀರ್ತಿಯನ್ನ ನೋಡಿದ ವೈದ್ಯರು ಸಾವನ್ನಪ್ಪಿರೋದಾಗಿ ಹೇಳಿದ್ದಾರೆ. ಯಾವಾಗ ಕೀರ್ತಿಯ ಉಸಿರು ನಿಂತಿದೆ ಅಂತಾ ಗೊತ್ತಾಯ್ತೋ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಅಯ್ಯೋ.. ಹೀಗಾಯ್ತಲ್ಲಾ.. ರಣಹದ್ದುವಿಗೆ ಕೊಟ್ಟು ನಮ್ಮ ಹುಡುಗಿಯನ್ನ ಕಳೆದುಕೊಂಡು ಬಿಟ್ವಿ ಅಂತಾ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರಿಟ್ರು… ಗೋಳಾಡಿದ್ರು..! ಕೀರ್ತಿಯ ಅಮ್ಮ, ಅಕ್ಕ, ನೆಂಟರಿಷ್ಟರ ಅರೆಚಾಟ-ಕಿರುಚಾಟ ಹೇಳತೀರದಾಗಿತ್ತು. ಜಸ್ಟ್‌ 26 ವರ್ಷಕ್ಕೆ ನಮ್ಮ ಹುಡುಗಿಯ ಬಾಳನ್ನೇ ತಿಂದುಹಾಕಿದನ್ನಲ್ಲ ಅನ್ನೋ ಆಕ್ರೋಶ ಭುಗಿಲೆದದಿತ್ತು.

ಪತ್ನಿ ಕೊಲೆ ಮಾಡಿ ಪತಿ ಅವಿನಾಶ್ ಪರಾರಿ
ಬರ್ಬರವಾಗಿ ಹೆಂಡ್ತಿಯನ್ನ ಕೊಲೆ ಮಾಡಿದ ನೀಚ ಪತಿರಾಯ, ಜನರು ಮನೆ ಹತ್ತಿರ ಜಮಾವಣೆಗೊಳ್ಳುವಷ್ಟರಲ್ಲಿ ಎಸ್ಕೇಪ್‌ ಆಗಿದ್ದಾನೆ. ಕನಿಷ್ಠ ಮಗುವಿನ ಮುಖ ನೋಡಿಯಾದ್ರೂ ಪತ್ನಿ ಕೊಲ್ಲುವ ಕೆಲಸಕ್ಕೆ ಕೈ ಹಾಕಬಾರದಿತ್ತು ಪಾಪಿ. ಆದರೆ, ಅದ್ಯಾವ್ದನ್ನೂ ನೋಡದೇ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ ಕ್ರೂರಿ. ಹೇಗಾದ್ರೂ ಮಾಡಿ ಕೀರ್ತಿಯನ್ನ ಬದುಕಿಸಲೇಬೇಕು ಅಂತಾ ಆಸ್ಪತ್ರೆಗೆ ತಂದ ಸಂಬಂಧಿಕರ ಯತ್ನ ಫಲಕಾರಿಯಾಗಲೇ ಇಲ್ಲ. ಅಷ್ಟೊತ್ತಿಗಾಗಲೇ ಸಮಯ ಮೀರಿ ಹೋಗಿತ್ತು, ಆಕೆಯ ಮೃತದೇಹವನ್ನ ನೋಡಿ ಕಣ್ಣೀರ ಕೋಡಿ ಹರಿಸಿದ್ದಾರೆ ಕುಟುಂಬಸ್ಥರು. ಇನ್ನೂ ಆಸ್ಪತ್ರೆಗೆ ಕೀರ್ತಿ ಶವವನ್ನ ನೋಡಲು ಬಂದ ಅವಿನಾಶ್‌ ಮನೆಯವರಿಗೆ ನೀವು ಆಕೆಯನ್ನ ನೋಡಬಾರದು. ನೀವೆಲ್ಲಾ ಸೇರಿಯೇ ಆಕೆಯನ್ನ ಮುಗಿಸಿದ್ರಿ ಅಂತಾ ಕೀರ್ತಿ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ಸದ್ಯ ಪರಾರಿಯಾಗಿರೋ ಅವಿನಾಶ್‌ ಗಾಗಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು, ಇನ್‌ಸ್ಪೆಕ್ಟರ್‌ ಸಚಿನ್‌ ನೇತೃತ್ವದಲ್ಲಿ ತಲಾಶ್‌ ನಡೆಸಿದ್ದಾರೆ. ಸದ್ಯದಲ್ಲೇ ಆರೋಪಿಯನ್ನ ಹಿಡಿಯುವ ವಿಶ್ವಾಸವನ್ನ ಸಚಿನ್‌ ಅವರ ತಂಡ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಅದೇನೆ ಆಗಲಿ, ದಾಂಪತ್ಯದಲ್ಲಿ ಮನಸ್ತಾಪಗಳು ಸಾಮಾನ್ಯ, ಹಾಗಂದ ಮಾತ್ರಕ್ಕೆ ಕೊಲ್ಲುವಷ್ಟು ಕ್ರೂರತನವನ್ನ ಮನುಷ್ಯ ಬೆಳೆಸಿಕೊಂಡಿದ್ದಾನೆ ಅಂತಾದ್ರೆ, ಆತ/ಆಕೆ ಭೂಮಿ ಮೇಲೆ ಬದುಕಲು ಅನರ್ಹರು.! ಯಾರಿಗೂ..ಯಾರ ಜೀವವನ್ನ ತೆಗೆಯುವ ಹಕ್ಕಿಲ್ಲ ಅನ್ನೋ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಇರಬೇಕು. ಆಗ ಕೊನೆಪಕ್ಷ ಈ ರೀತಿಯ ಕ್ರೂರ ಘಟನೆಗಳಾದ್ರೂ ಕಡಿಮೆಯಾಗಬಹುದು.!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!