ಕೊಲ್ಕತ್ತಾ : ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಐದು ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಜೋಸ್ ಬಟ್ಲರ್ 68 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತದ ಮಾರಕ ಬೌಲಿಂಗ್ ದಾಳಿ ಹಾಗೂ ಅದ್ಭುತ ಕ್ಷೇತ್ರರಕ್ಷಣೆಗೆ ಇಂಗ್ಲೀಷ್ ಬ್ಯಾಟರ್‌ಗಳು ತತ್ತರಿಸಿದರು.
ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಭದ್ರ ಅಡಿಪಾಯ ಹಾಕಿಕೊಟ್ಟಿತು. ಸಂಜು ಸ್ಯಾಮ್ಸನ್ 26 ರನ್‌ಗೆ ಔಟ್ ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಹೊರನಡೆದರು. ಬಳಿಕ ಬಂದ ತಿಲಕ್ ವರ್ಮಾ ಜೊತೆಗೂಡಿ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಶರ್ಮಾ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. 34 ಎಸೆತದಲ್ಲಿ 8 ಸಿಕ್ಸರ್, 4 ಬೌಂಡರಿ ಸಹಿತ 79 ರನ್ ಸಿಡಿಸಿದರು. ಶರ್ಮಾ ಆಟದೆದುರು ಇಂಗ್ಲೆಂಡ್ ಬೌಲರ್‌ಗಳು ತತ್ತರಿಸಿದರು. 12.5 ಓವರ್‌ನಲ್ಲಿ ಭಾರತ ಗೆಲುವಿನ ನಗೆ ಬೀರಿತು.
Ind Vs Eng T20 ಸರಣಿ – ಮೊದಲ ಪಂದ್ಯದಲ್ಲಿ ಆಂಗ್ಲರ ಮೇಲೆ ಸವಾರಿ ಮಾಡಿದ ಅಭಿಷೇಕ್ ಶರ್ಮಾ – ಭಾರತಕ್ಕೆ ಭರ್ಜರಿ ಜಯ
RELATED ARTICLES