ಕೊಪ್ಪ: ಶಮಿತಾ ನಿಗೂಢ ಸಾವು ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದಡಿ ಮೊರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ನಿರಂತರವಾಗಿ ವರದಿ ಬಿತ್ತರಿಸಿತ್ತು ಇಂದು ಆ ವರದಿಗೆ ದೊಡ್ಡ ಫಲಶೃತಿ ಸಿಕ್ಕಿದೆ.

ವಸತಿ ಶಾಲೆಯ ಪ್ರಿನ್ಸಿಪಾಲ್ ರಜಿನಿ, ವಾರ್ಡನ್ ಸುಂದರ್ ನಾಯ್ಕ್ ಅವರನ್ನು ಸಸ್ಪೆಂಡ್ ಮಾಡಿ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜ್ ಅವರು ಆದೇಶ ನೀಡಿದ್ದಾರೆ.
ಜೂನ್ 28ರಂದು ಕೊಪ್ಪದ ಮುರಾರ್ಜಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತಿದ್ದ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆಗೆ ಶರಣಾಗಿದ್ದು ಆದರೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಶಮಿತಾ ಪೋಷಕರು ಹಾಗಾಗಿ ಪೋಷಕರು, ಹಾಗೂ ಅಲ್ಲಿನ ಸ್ಥಳಿಯರು ನ್ಯಾಯ ಒದಗಿಸಿ ಕೊಡಲು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಹೀಗಾಗಿ ಪೋಷಕರ ಜೊತೆ ನಿಂತು ಅಭಿಯಾನ ನಡೆಸಿದ್ದ PUBLIC IMPACT ಕೊನೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ಶಾಸಕ ಟಿ.ಡಿ.ರಾಜೇಗೌಡ
ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಮಿತಾ ಎಂಬ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿ ಪ್ರತಿಭಟನೆಯನ್ನು ನಡೆಸಿದ್ದರು.