Tuesday, March 31, 2026
Homebig breakingಪಕ್ಷದ ತತ್ವ, ಸಿದ್ಧಾಂತದ ಪ್ರಕಾರ ಪ್ರತಾಪ್‌ ಸಿಂಹ ನಡೆದುಕೊಳ್ಳಲಿ - ಸಂಸದ ಯದುವೀರ್‌

ಪಕ್ಷದ ತತ್ವ, ಸಿದ್ಧಾಂತದ ಪ್ರಕಾರ ಪ್ರತಾಪ್‌ ಸಿಂಹ ನಡೆದುಕೊಳ್ಳಲಿ – ಸಂಸದ ಯದುವೀರ್‌

ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಿಜೆಪಿ ಕಾರ್ಯಕರ್ತರು ದೂರು ನೀಡಿರುವ ವಿಚಾರ ಕುರಿತು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪ್ರತಾಪ್ ಸಿಂಹ ಅವರು ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಲಿ. ಪ್ರತಾಪ್ ಸಿಂಹ ಅವರ ಇತ್ತೀಚಿನ ನಡೆಗೆ ಬೇಸರ ವ್ಯಕ್ತವಾಗಿದೆ. ಕಳೆದ‌ ಮೂರು‌ ನಾಲ್ಕು ತಿಂಗಳಿಂದ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸಹಜವಾಗಿಯೇ ಕಾರ್ಯಕರ್ತರಿಗೆ ಬೇಸರ ತರಿಸಿದೆ. ಹೀಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ವರಿಷ್ಠರಿಗೆ ದೂರು‌ ನೀಡಿದ್ದಾರೆ ಎಂದಿದ್ದಾರೆ.
ಈ ಕುರಿತು ರಾಜ್ಯಾಧ್ಯಕ್ಷರು ಕ್ರಮಕೈಗೊಳ್ಳುತ್ತಾರೆ. ಸದ್ಯಕ್ಕೆ‌ ಪ್ರತಾಪ್ ಸಿಂಹ ಅವರು ಭಿನ್ನಾಭಿಪ್ರಾಯಗಳನ್ನ ದೂರ ಇರಿಸಲಿ. ಪಕ್ಷಕ್ಕೆ ಧಕ್ಕೆ ಬರದ ರೀತಿ ನಡೆದುಕೊಂಡು, ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!