I-T Raid; ಅಕ್ರಮ ಆಸ್ತಿ ಗಳಿಸಿ ಸುಖ ನಿದ್ರೆಯಲ್ಲಿ ಇದ್ದವರ ಮನೆ ಮೇಲೆ ಲೋಕಯುಕ್ತದಾಳಿ ನಡೆಸಿದೆ.
ಬೆಂಗಳೂರು; ರಾಜ್ಯದ ರಾಮನಗರ, ಬೀದರ್ ಸೇರಿದಂತೆ 60 ಕಡೆಗಳಲ್ಲಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಯುಕ್ತದಾಳಿ ನಡೆಸಿ ಅಕ್ರಮ ಆಸ್ತಿ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ರಾಜ್ಯದ ಅತಿ ಶ್ರೀಮಂತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ರಾಮನಗರ (Ramnagar) ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಯತೀಶ್ ಚಂದ್ರ ಮನೆ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಖಾಸಗಿ ರೆಸಾರ್ಟ್ನಲ್ಲಿ ಪಿಡಿಓ ಯತೀಶ್ನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು,ಅಕ್ರಮ ಆಸ್ತಿ ಗಳಿಕೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಯತೀಶ್ ಚಂದ್ರ ಅವರಿಗೆ ಸೇರಿದ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದೆ. ಅಷ್ಟೇ ಅಲ್ಲದೇ ಧಾರವಾಡ ಅರಣ್ಯ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ, ಆರ್ಟಿಓ ಅಧಿಕಾರಿಯ ನಿವಾಸದಲ್ಲಿ ಪರಿಶೀಲನೆ,ಚಿಕ್ಕಬಳ್ಳಾಫುರ ಕೆಆರ್ಡಿಎಲ್ ಅಧಿಕಾರಿ ಮನೆ ಮೇಲೆ ಲೋಕಯುಕ್ತ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆ ಬಗ್ಗೆ ವಿಚಾರಣೆ ನಡೆಸಿದೆ.
ದಾಳಿಗೊಳಗಾದ ಅಧಿಕಾರಿಗಳ ವಿವರ
ರಂಗನಾಥ್ ಎಸ್.ಪಿ – ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್ ಗೆ ಸಂಬಂಧಿಸಿದ ಬೆಂಗಳೂರಿನ 5 ಸ್ಥಳಗಳು
ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳು
ಪ್ರಕಾಶ್ – ಜ್ಯೂನಿಯರ್ ಇಂಜಿನಿಯರ್ – ಸಂಬಂಧಿಸಿದ ಕಾರವಾರ – ಉ.ಕ ಜಿಲ್ಲೆಯ 4 ಸ್ಥಳಗಳು
ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ 12 ಸ್ಥಳಗಳು
ಜಯಣ್ಣ ಬಿ.ವಿ. ಮುಖ್ಯ ಕಾರ್ಯಕಾರಿ ಅಭಿಯಂತರ, ಕೊಡಗು
ಮಹೇಶ್ ಚಂದ್ರಯ್ಯ ಹೀರೆಮಠ್- ಅರಣ್ಯ ವಲಯದ ಅಧಿಕಾರಿ- ಧಾರವಾಡದ 6 ಸ್ಥಳಗಳು
ಶಿವಕುಮಾರಸ್ವಾಮಿ- ಎಕ್ಸಿಕ್ಯೂಟಿವ್ ಇಂಜಿನಿಯರ್ ಬೀದರ್ ನ 4 ಸ್ಥಳಗಳು
ನಾಗರಾಜಪ್ಪ- ಅಸ್ಟಿಸೆಂಟ್ ಡೈರೆಕ್ಟರ್ ಕೋಲಾರದ ಐದು ಕಡೆಗಳಲ್ಲಿ
ಷಣ್ಮುಗಪ್ಪ, ಎಆರ್ ಟಿಓ ಜಮಖಂಡಿ, ಬಾಗಲಕೋಟೆಯ ನಾಲ್ಕು ಕಡೆಗಳಲ್ಲಿ
ಸದಾಶಿವಯ್ಯ, ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಬಳ್ಳಾಪುರದ 6 ಕಡೆಗಳಲ್ಲಿ ದಾಳಿ
ಕೃಷ್ಣಗೌಡ- ದ್ವೀತಿಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ, ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿ, ಮಂಡ್ಯ ನಾಲ್ಕು ಕಡೆಗಳಲ್ಲಿ ದಾಳಿ