ಹುಬ್ಬಳ್ಳಿ : ತನ್ನ ಅಂಗಡಿಗೆ ಬರುತ್ತಿದ್ದ ಯುವತಿಯರ ಜೊತೆ ಪ್ರೀತಿಯ ನಾಟಕವಾಗಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಬ್ಲ್ಯಾಕ್‌ಮೇಲ್ ಮಾಡಿಕೊಂಡು ವಿಕೃತಿ ಮೆರೆಯುತ್ತಿದ್ದ ಕಾಮಿಯ ಪುರಾಣವೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಹಳೆ ಹುಬ್ಬಳ್ಳಿಯಲ್ಲಿ ಜೆರಾಕ್ಸ್ ಶಾಪ್ ಇಟ್ಟುಕೊಂಡಿದ್ದ 38 ವರ್ಷದ ಅಶ್ಪಾಕ್ ಜೋಗನ್‌ಕೊಪ್ಪ ತನ್ನ ಅಂಗಡಿಗೆ ಬರುತ್ತಿದ್ದ ಯುವತಿಯರನ್ನು ಪ್ರೀತಿಯ ನಾಟಕವಾಗಿ ಬಲೆಗೆ ಬೀಳಿಸುತ್ತಿದ್ದ. ಬಳಿಕ ಅವರೊಂದಿಗೆ ಕಾಮದಾಟ ಆಡಿ, ಅದನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ನಂತರ ಬ್ಲ್ಯಾಕ್‌ಮೇಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಬಡ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಈತ ಕೃತ್ಯವೆಸಗುತ್ತಿದ್ದ ಅನ್ನೋದು ಗೊತ್ತಾಗಿದೆ. ಹೀಗೆ ವಿಕೃತಿ ಮೆರೆಯುತ್ತಿದ್ದ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಈತನ ವಿಕೃತಿ ಒಂದೊಂದಾಗಿ ಬಯಲಾಗಿದೆ.
ಹತ್ತಕ್ಕೂ ಹೆಚ್ಚು ಮಹಿಳೆಯರು ಹಾಗೂ ಯುವತಿಯರೊಂದಿಗೆ ಈತ ದೈಹಿಕ ಸಂಪರ್ಕ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಅವರಿಗೆ ಬೆದರಿಕೆ ಹಾಕುತ್ತಿದ್ದ. ವಿಚಾರಣೆ ವೇಳೆ ವಿಕೃತ ಕಾಮಿ ಮೊಬೈಲ್‌ನಲ್ಲಿ ಹತ್ತಕ್ಕೂ ಹೆಚ್ಚು ಯುವತಿಯ ಜೊತೆಗಿನ ವಿಡಿಯೋ ಬಯಲಾಗಿದೆ.
ಯುವತಿಯರೊಂದಿಗೆ ಪ್ರೀತಿ ನಾಟಕ – ಮಂಚಕ್ಕೆ ಕರೆದು ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ – ವಿಕೃತ ಕಾಮಿಯ ಬೆಂಡೆತ್ತಿದ ಹುಬ್ಬಳ್ಳಿ ಪೊಲೀಸರು..!
RELATED ARTICLES
