ಚಿತ್ರದುರ್ಗ : ಕಾಲೇಜು ಕಟ್ಟಡದಿಂದ ಜಿಗಿದುವಿದ್ಯಾರ್ಥಿನೊಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯುವಕನೊಬ್ಬನ ಪ್ರೇಮ ಕಾಟವೇ ಕಾರಣ ಅನ್ನುವ ಆರೋಪ ಕೇಳಿಬಂದಿದೆ.
ಚಳ್ಳಕೆರೆ ಮೂಲದ ಪ್ರೇಮ (18) ಮೃತ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಪದವಿ ಅಭ್ಯಾಸ ಮಾಡುತ್ತಿದ್ದಳು. ಈಕೆಗೆ ತರುಣ್ ಎಂಬಾತ ತನ್ನನ್ನು ಪ್ರೀತಿಸುವಂತೆ ನಿರಂತರ ಒತ್ತಡ ಹೇರುತ್ತಿದ್ದ ಅನ್ನುವ ಆರೋಪ ಪೋಷಕರಿಂದ ವ್ಯಕ್ತವಾಗಿದೆ. ಪ್ರೀತಿಯ ಒಗ್ಗೆ ಆಸಕ್ತಿಯಿಲ್ಲದ ಆಕೆಯನ್ನು ಆತ ನಿರಂತರವಾಗಿ ಪೀಡಿಸುತ್ತಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗಳ ಜತೆ ತರುಣ್ ಎಂಬಾತ ವಾಟ್ಸಪ್ ಚಾಟ್ ಮಾಡಿರುವ ಮಾಹಿತಿಯನ್ನು ಪೋಷಕರು ಪೊಲೀಸರಿಗೆ ನೀಡಿದ್ದಾರೆ.



