ಚಿಕ್ಕಮಗಳೂರು : ಗುಂಡೇಟು ತಗಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಳವಾಸೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅರುಣ್(47) ಮೃತ ವ್ಯಕ್ತಿ. ಇದು ಆಕಸ್ಮಿಕವಾಗಿ ನಡೆದ ಘಟನೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಅವರ ಮನೆಯ ಶೆಡ್‌ನಲ್ಲಿ ಬಂದೂಕು ಇತ್ತು ಎನ್ನಲಾಗಿದೆ. ಅದನ್ನು ತೆಗೆದಿಡುವಾಗ ಮಿಸ್ ಫೈರ್ ಆಗಿರಬಹುದು ಅಂತ ಶಂಕಿಸಲಾಗಿದೆ. ಘಟನೆಯಲ್ಲಿ ಅರುಣ್ ಅವರ ಬಲಗಣ್ಣಿ ಭಾಗಕ್ಕೆ ಗುಂಡು ಹಾರಿದ್ದು, ಹಣೆಯ ಭಾಗ ಛಿದ್ರವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಈ ಘಟನೆ ನಡೆದಿದೆ. ಮೃತದೇಹ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡೇಟು ತಗಲಿ ವ್ಯಕ್ತಿ ದುರ್ಮರಣ – ಇದು ಆಕಸ್ಮಿಕವೋ? ಆತ್ಮಹತ್ಯೆಯೋ..!?
RELATED ARTICLES