ಬೆಂಗಳೂರು : ಮುಡಾ ಅಕ್ರಮ ಸಂಬಂಧ ನಾಳೆ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ವಿಚಾರವಾಗಿ ಧಾರವಾಡ ಪೀಠದಲ್ಲಿ ಜಡ್ಜ್ಮೆಂಟ್ ಬರಲಿದೆ.
ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣ ಸಂಬಂಧ ಎರಡು ಕಡೆಯ ಸುದೀರ್ಘ ವಾದ ಆಲಿಸಿದ್ದ ನ್ಯಾ. ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿತ್ತು. ನಾಳೆ ಬೆಳಗ್ಗೆ ೧೦.೩೦ಕ್ಕೆ ಪ್ರಕರಣದ ತೀರ್ಪು ಬರಲಿದೆ.
ತನಿಖೆಯನ್ನು ಸಿಬಿಐಗೆ ವಹಿಸುತ್ತಾ? ಅಥವಾ ಅರ್ಜಿ ತಿರಸ್ಕಾರವಾಗುತ್ತಾ? ಯಾವ ತೀರ್ಪು ಹೊರಬರುತ್ತೆ ಅನ್ನುವ ಕುತೂಹ ಈಗ ಗರಿಗೆದರಿದೆ. ಸದ್ಯ ಮಂಡಿ ನೋವಿನಿಂದ ವಿಶ್ರಾಂತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಟೆನ್ಶನ್ ಹೆಚ್ಚಾಗಿದೆ.
Muda Case : ನಾಳೆ ಹೈಕೋರ್ಟ್ ತೀರ್ಪು – ಸಿದ್ದರಾಮಯ್ಯಗೆ ಶುರುವಾಯ್ತು ಟೆನ್ಶನ್..!
RELATED ARTICLES