ಚಿಕ್ಕಮಗಳೂರು : ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಘರ್ಷಣೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗಲಾಟೆಗೆ ಗಲಾಟೆಗೆ ಸರ್ಕಾರವೇ ನೇರ ಹೊಣೆ ಅಂತ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತಾಂಧತೆ ಮಿತಿ ಮೀರಿದೆ. ಮತಾಂಧತೆಯ ಗುಮ್ಮ ಅವರ ನೆತ್ತಿಗೆ ಏರಿದೆ. ಇದರಿಂದ ಹಿಂದೂಗಳು ನಿತ್ಯ ನೋವು ಪಡುವಂತಾಗಿದೆ. ನಾಗಮಂಗಲದ ಗಲಭೆ ಪೂರ್ವಯೋಜಿತ ಕೃತ್ಯವಾಗಿದೆ. ನಾವು ಏನು ಮಾಡಿದರೂ ನಡೆಯುತ್ತೆ ಎಂಬ ಮನಸ್ಥಿತಿ ಮತಾಂಧರಲ್ಲಿದೆ ಎಂದು ಸಿ.ಟಿ. ರವಿ ಹೇಳಿಕೊಂಡಿದ್ದಾರೆ.
ಕಲ್ಲು ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೇಲೆ ದಾಳಿಯಾಗಿದೆ. ಮಚ್ಚು-ಲಾಂಗು ಹಿಡಿದು ಗಲಾಟೆ ಮಾಡಿದ್ದಾರೆ. ಉತ್ತರ ಪ್ರದೇಶ ಮಾದರಿಯ ಸರ್ಕಾರವೇ ಇದಕ್ಕೆ ಮದ್ದು. ಅಂಥ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬೇಕು. ಗಲಭೆ ಸೃಷ್ಟಿಸಿ ನಷ್ಟವುಂಟು ಮಾಡಿದವರಿಗೆ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿದ್ದಾರೆ.


