ಚಿಕ್ಕಮಗಳೂರು : ಒಂದೆಡೆ ನಕ್ಸಲೀಯರ ಶರಣಾಗತಿ ಮೂಲಕ ಕರ್ನಾಟಕದ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಹುತೇಕ ಅಂತ್ಯವಾದಂತಾಗಿದೆ. ಶರಣಾಗತಿಗೆ ಆಹ್ವಾನಿಸುವ ಜೊತೆಗೆ ಅವರಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನ ಸರ್ಕಾರದಿಂದ ಒದಗಿಸುವ ಭರವಸೆಯನ್ನೂ ಸರ್ಕಾರ ನೀಡಿದೆ. ಆದರೆ ಈ ನಡುವೆ ಈ ಹಿಂದೆ ಸರ್ಕಾರದ ಭರವಸೆಗೆ ಓಗೊಟ್ಟು ಶರಣಾದ ಮಹಿಳಾ ನಕ್ಸಲ್ ಒಬ್ಬರ ಕುಟುಂಬದ ಕರುಣಾಜನಕ ಕಥೆ ಬೆಳಕಿಗೆ ಬಂದಿದೆ.
ಹಿಂದೆ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕನ್ಯಾಕುಮಾರಿ ಎಂಬವರು ಸರ್ಕಾರದ ಆಶ್ವಾಸನೆಗೆ ಓಗೊಟ್ಟು ಕೆಲವು ವರ್ಷಗಳ ಹಿಂದೆ ಶರಣಾಗಿದ್ದರು. ಅದು ಕೂಡಾ ತನ್ನ ಪುಟ್ಟ ಕಂದಮ್ಮನ ಜೊತೆಗೆ. ಆದರೆ ಅದಾದ ನಂತರ ಆಕೆ ಮುಖ್ಯವಾಹಿನಿಯಲ್ಲಿ ಜೀವನ ಸಾಗಿಸುತ್ತಿರಬಹುದು ಅಂದುಕೊಂಡಿದ್ರೆ ತಪ್ಪಾಗುತ್ತೆ. ಸದ್ಯ ೬೦ಕ್ಕೂ ಹೆಚ್ಚು ಕೇಸ್‌ಗಳನ್ನ ಆಕೆ ಎದುರಿಸುತ್ತಿದ್ದು, ಜೈಲಿನಲ್ಲಿ ಜೀವನ ಸಾಗಿಸುವಂತಾಗಿದೆ.
ಈ ವಿಚಾರವನ್ನ ಖುದ್ದು ಆಕೆಯ ಪತಿ ಶಿವ ಎಂಬವರೇ ಬಾಯ್ಬಿಟ್ಟಿದ್ದಾರೆ. ೮ ವರ್ಷದ ಹಿಂದೆ ನನ್ನ ಪತ್ನಿ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಶರಣಾಗಿದ್ದಳು. ಆ ಸಂದರ್ಭದಲ್ಲಿ ಹಣಕಾಸು, ವಸತಿ, ಜಮೀನು ಕೊಡ್ತೇವೆ ಅಂತೆಲ್ಲ ಭರವಸೆ ನೀಡಿದ್ರು. ಆದರೆ ಆಕೆ ಶರಣಾದ ಬಳಿಕ ಆಗಿದ್ದೇ ಬೇರೆ. ಆಕೆ ಮೇಲೆ ೬೪ ಕೇಸ್‌ಗಳಿದ್ದು, ಇಂದಿಗೂ ಜೈಲಿನಲ್ಲೇ ಜೀವನ ಕಳೆಯುತ್ತಿದ್ದಾಳೆ ಅಂತ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ನಮಗೆ ಕೊಟ್ಟ ಯಾವುದೇ ಭರವಸೆಗಳನ್ನ ಈಡೇರಿಸಿಲ್ಲ. ನನ್ನ ಪತ್ನಿ ಕನ್ಯಾಕುಮಾರಿ ಮೇಲೆ ಹಾಕಿರುವ 64 ಕೇಸ್‌ಗಳು ಇಂದಿಗೂ ಬಗೆಹರಿದಿಲ್ಲ. ಬೇಲ್ ಕೂಡ ಕೊಡ್ತಿಲ್ಲ. ಕೋರ್ಟ್ ಕಚೇರಿ ಓಡಾಡೋಕೆ ತುಂಬಾ ಆರ್ಥಿಕ ಸಮಸ್ಯೆ ಉಂಟಾಗಿದೆ. ಆರಂಭದಲ್ಲಿ 3-4 ವರ್ಷದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹೊರಗಡೆ ಬರ್ತಾರೆ ಅಂದಿದ್ರು. ಆದರೆ 8 ವರ್ಷವಾದ್ರೂ ಇನ್ನೂ ಹೊರಬಂದಿಲ್ಲ ಅಂತ ನೋವಿನಿಂದ ಹೇಳಿದ್ರು.
ಆಕೆ ಹೊರಗಡೆ ಬರ್ತಾರೆ ಅನ್ನೋ ನಂಬಿಕೆಯೇ ಹೋಗಿದೆ. ಪುಟ್ಟ ಮಗುವನ್ನ ಇಡ್ಕೊಂಡು ಕಷ್ಟದಲ್ಲಿ ಜೀವನ ಸಾಗಿಸ್ತಾ ಇದ್ದೇನೆ ಅಂತ ಹೇಳ್ತಾ ತನ್ನ ಜೀವನದ ನೋವಿನ ವಿಚಾರವನ್ನ ಹಂಚಿಕೊಂಡ್ರು. ಅವ್ರು ಏನೆಲ್ಲ ಮಾತನಾಡಿದ್ದಾರೆ ಅನ್ನೋದನ್ನ ನೀವು ಪಬ್ಲಿಕ್ ಇಂಪ್ಯಾಕ್ಟ್ ಯೂಟ್ಯೂಬ್ ಚಾನಲ್‌ನಲ್ಲಿ ನೋಡಬಹುದು.
