Wednesday, February 11, 2026
Homebig breakingಪ್ರಾಸಿಕ್ಯೂಷನ್‌ಗೆ ಅನುಮತಿ - ಹೈಕೋರ್ಟ್‌ನಲ್ಲಿ ರಾಜ್ಯಪಾಲರ ಪರ ವಾದ ಮಂಡನೆ…

ಪ್ರಾಸಿಕ್ಯೂಷನ್‌ಗೆ ಅನುಮತಿ – ಹೈಕೋರ್ಟ್‌ನಲ್ಲಿ ರಾಜ್ಯಪಾಲರ ಪರ ವಾದ ಮಂಡನೆ…

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ರಾಜ್ಯಪಾಲರ ಪರ ಸಾಲಿಸಿಟರ್‌ ಜನಲರ್‌ ತುಷಾರ್‌ ಮೆಹ್ತಾ ವಾದ ಮಂಡಿಸುತ್ತಿದ್ದಾರೆ.
ಅವರ ವಾದದ ಪ್ರಮುಖ ಅಂಶ ಹೀಗಿದೆ…
ಕ್ಯಾಬಿನೆಟ್‌ ಸಲಹೆಯನ್ನೂ ಪರಿಗಣಿಸಿ ಅಭಿಪ್ರಾಯ ದಾಖಲಿಸಿದ್ದಾರೆ.
ಕಡತ ಗಮನಿಸಿದರೆ ರಾಜ್ಯಪಾಲರು ವಿವೇಚನೆ ಬಳಸಿರುವುದು ತಿಳಿಯುತ್ತದೆ.
ಆಗಸ್ಟ್‌ 14ರಂದು ಎಲ್ಲವನ್ನೂ ಓದಿ ನಿರ್ಧಾರ ತೆಗೆದುಕೊಂಡಿದ್ದಾರೆ.
17A ಅಡಿಯಲ್ಲಿ ಮಾತ್ರ ಆದೇಶ ನೀಡಿದ್ದಾರೆ.
ರಾಜ್ಯಪಾಲರ ಆದೇಶದ ಒರಿಜಿನಲ್‌ ದಾಖಲೆಯನ್ನು ನ್ಯಾಯಾದೀಶರಿಗೆ ನೀಡಿದ ಮೆಹ್ತಾ.
ಜತೆಗೆ ನಕಲು ಪ್ರತಿಯನ್ನು ಸಿಎಂ ಪರ ವಕೀಲರಿಗೂ ನೀಡಿದ ಮೆಹ್ತಾ.
ಒರಿಜಿನಲ್‌ ಪ್ರತಿಯನ್ನು ತಮ್ಮ ಬಳಿ ಇರಿಸಿಕೊಳ್ಳಬಹುದೆ ಅಂತ ಕೇಳಿದ ನ್ಯಾಯಾದೀಶರು.
ದೂರುದಾರ ಅಬ್ರಹಾಂ ಹಾಗೂ ಸರ್ಕಾರದ ದಾಖಲೆಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ವಿವಿಧ ಪ್ರಕರಣಗಳ ಉಲ್ಲೇಖಿಸಿದ ಸಾಲಿಸಿಟರ್‌ ಜನರಲ್.
1998 ನೋಟಿಫಿಕೇಷನ್‌, ಡಿನೋಟಿಫಿಕೇಷನ್‌ ಸಂದರ್ಭ ಸಿದ್ದರಾಮಯ್ಯ ಶಾಸಕರಾಗಿದ್ದರು. ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನ ನೀಡಲಾಗಿದೆ. ‌

ನ್ಯಾ.ನಾಗಪ್ರಸನ್ನ ಅಭಿಪ್ರಾಯ : 17ಎ ಅಡಿಯಲ್ಲಿ ಅನುಮತಿ ಇಲ್ಲದೆ ತನಿಖೆ ನಡೆಸುವಂತಿಲ್ಲ. ಪೊಲೀಸರೇ ಅನುಮತಿ ಪಡೆಯಬೇಕೆಂದಿಲ್ಲ. ಯಾರು ಬೇಕಾದರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬಹುದು. ನಾನೇ ಈ ಹಿಂದೆ ಪ್ರಕರಣವೊಂದರ ತೀರ್ಪಿನಲ್ಲಿ ಹೇಳಿದ್ದೇನೆ.

ಮೆಹ್ತಾ : ಸಂಪುಟ ಸಭೆಯಲ್ಲಿ ಸಿಎಂ ಭಾಗವಹಿದಿರಬಹುದು. ಆದರೆ ಸಿಎಂ ನೇಮಿಸಿದ ವ್ಯಕ್ತಿ ಸಭೆ ನಡೆಸಿದ್ದಾರೆ. ಹೀಗಾಗಿ ಆ ಸಭೆಗೆ ಮಹತ್ವವಿಲ್ಲ. ಸಿಎಂ, ಸಚಿವರು ತಮ್ಮ ವಿವೇಚನೆಯನ್ನೇ ಬಳಸಿಲ್ಲ.

ರಾಜ್ಯಪಾಲರ ವಿರುದ್ದ ಫ್ರೆಂಡ್ಲಿ, ಕಾಮಿನಲ್‌ ಎಂಬ ಪದ ಬಳಸಿದ್ದಾರೆ. ಸಾಂವಿಧಾನಿಕ ಹುದ್ದೆ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕು.


* ಅಭೀಷೇಕ್‌ ಮನು ಸಿಂಘ್ವಿ ಉಲ್ಲೇಖಿಸಿದ ಪ್ರಕರಣಗಳು ರಾಜ್ಯಪಾಲರ ಪರವಾಗಿದೆ ಎಂದ ಮೆಹ್ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!